Saturday, June 6, 2026
Homeತಾಜಾ ಸುದ್ದಿವಿಧಾನಸೌಧದ ಆವರಣದಲ್ಲಿ ಕಾಣಿಸಿಕೊಂಡ ನಾಗರಹಾವು

ವಿಧಾನಸೌಧದ ಆವರಣದಲ್ಲಿ ಕಾಣಿಸಿಕೊಂಡ ನಾಗರಹಾವು

- Advertisement -
- Advertisement -

ಬೆಂಗಳೂರು: ಆಡಳಿತದ ಶಕ್ತಿ ಕೇಂದ್ರ ವಿಧಾನ ಸೌಧದಲ್ಲಿ ಇಂದು ನಾಗರ ಹಾವು ಕಾಣಿಸಿಕೊಂಡಿದೆ.

ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆ ಎದುರಿನ ರಸ್ತೆಯಲ್ಲಿ ನಾಗರಹಾವು ದಾಟಿ ಹೋಗಿದೆ.

ತಿಂಗಳ ನಾಲ್ಕನೇ ಶನಿವಾರವಾಗಿರುವ ಹಿನ್ನೆಲೆಯಲ್ಲಿ ರಜೆ ಇದ್ದ ಕಾರಣ ವಿಧಾನಸೌಧದ ಆವರಣದಲ್ಲಿ ಜನರ ಓಡಾಟ ಕಡಿಮೆ ಇತ್ತು.

ನಾಗರ ಹಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿದ್ದ ಕೆಲವು ಸಿಬ್ಬಂದಿಗೆ ಕೆಲವು ಹೊತ್ತು ಆತಂಕ ಕಾಡಿತ್ತು.

- Advertisement -

Latest News

error: Content is protected !!