Wednesday, June 24, 2026
Homeಕರಾವಳಿವಿಶ್ರಾಂತಿ ಪಡೆಯುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಕೆಎಸ್ ಆರ್ ಟಿ ಸಿ ಬಸ್ ಚಾಲಕ ನಿಧನ

ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಕೆಎಸ್ ಆರ್ ಟಿ ಸಿ ಬಸ್ ಚಾಲಕ ನಿಧನ

- Advertisement -
- Advertisement -

ಸುಳ್ಯ: ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರು ಬಸ್ ನಿಲ್ದಾಣದಲ್ಲಿಯೇ ನಿಧನರಾದ ಘಟನೆ ಸುಳ್ಯ‌ ತಾಲೂಕಿನ ಮರ್ಕಂಜದಲ್ಲಿ ನಡೆದಿದೆ.

ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲೇಶ್ (56) ಇಂದು ಮರ್ಕಂಜ ಬಸ್ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ

ಮರ್ಕಂಜ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ವಿಶ್ರಾಂತಿಗೆಂದು ತೆರಳಿದ್ದ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡು ಉಸಿರಾಟದ ತೊಂದರೆ ಎದುರಾಗಿತ್ತು.

ತಕ್ಷಣವೇ ಬಸ್ಸು ನಿರ್ವಾಹಕ ಸಿದ್ದಪ್ಪ ಚಾಲಕ ಮಲ್ಲೇಶ್ ಅವರನ್ನು ಜೀಪಿನಲ್ಲಿ ಸುಳ್ಯ ಆಸ್ಪತ್ರೆಗೆ ಕರೆದೊಯ್ದಿದಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ಮಲ್ಲೇಶ್ ರವರು ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

- Advertisement -

Latest News

error: Content is protected !!