Saturday, June 13, 2026
Homeಕೊಡಗುಪ್ರವಾಹದಲ್ಲಿ  ಸಿಲುಕಿದ ಜೀಪ್ ನ ರಕ್ಷಣೆ

ಪ್ರವಾಹದಲ್ಲಿ  ಸಿಲುಕಿದ ಜೀಪ್ ನ ರಕ್ಷಣೆ

- Advertisement -
- Advertisement -

ಕೊಡಗು: ಪ್ರವಾಹದಿಂದ ಜಲಾವೃತವಾಗಿದ್ದ ರಸ್ತೆಯಲ್ಲಿ  ಸಿಲುಕಿದ ಜೀಪ್ ವೊಂದನ್ನು ರಕ್ಷಿಸಿದ ಘಟನೆ ಕೊಡಗಿನ ನಾಪೋಕ್ಲು- ಹೊದ್ದೂರು ಸಂಪರ್ಕ ರಸ್ತೆಯ ಬೊಳಿಬಾಣೆ ಎಂಬಲ್ಲಿ  ನಡೆದಿದೆ.

ಎದೆಮಟ್ಟದ ನೀರಿನಲ್ಲಿ ಜೀಪ್ ಚಲಾಯಿಸಲು ಕಾಲೂರು ಮೂಲದ ಚಾಲಕ ಯತ್ನಿಸಿದ್ದಾನೆ.ಈ ವೇಳೆ ಪ್ರವಾಹ‌ದ ಮಧ್ಯದಲ್ಲಿ ಇಂಜಿನ್ ಆಫ್ ಆಗಿ‌ ನಿಂತಿದೆ ಜೀಪು. ಕುಟುಂಬದ ಜೊತೆ ಪ್ರವಾಹ ವೀಕ್ಷಿಸಲು ಬಂದಿದ್ದ ಚಾಲಕ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.

ಸ್ಥಳೀಯ ನಿವಾಸಿ ಮಹಮ್ಮದ್ ಅಬ್ದುಲ್ ಮತ್ತು ಅವರ ಸ್ನೇಹಿತರು ಜೀಪ್ ಮತ್ತು ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ನೀರು ಹೆಚ್ಚಿನ ರಭಸ ಇಲ್ಲದ್ದರಿಂದ ಭಾರೀ ಅನಾಹುತ ತಪ್ಪಿದೆ.

- Advertisement -

Latest News

error: Content is protected !!