ಸುರತ್ಕಲ್: ಮಂಗಳೂರು ನಗರಕ್ಕೆ ಹಾಗೂ ಕೈಗಾರಿಕ ಪ್ರದೇಶಕ್ಕೆ ಹತ್ತಿರವಾದ ರೈಲು ನಿಲ್ದಾಣವಾದ ಸುರತ್ಕಲ್ ಕೊಂಕಣ ರೈಲು ನಿಲ್ದಾಣದ ಅಭಿವೃದ್ಧಿಯ ಕುರಿತಾಗಿ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಸ್ಪಂದಿಸಿದ್ದು, 1.25 ಕೋಟಿ ರೂ. ಬಿಡುಗಡೆಗೆ ಕ್ರಮ ಕೈಗೊಂಡಿದ್ದಾರೆ.
ಪ್ರಮುಖ ಬೇಡಿಕೆಗಳಾದ ಪ್ಯಾಸೆಂಜರ್ ರೈಲ್ವೇ ರಿಸರ್ವೇಷನ್ ವ್ಯವಸ್ಥೆಗೆ ಒಪ್ಪಿಗೆ ದೊರೆತಿದ್ದು, ಕೇಂದ್ರ ಕಚೇರಿಯಿಂದ ರಿಸರ್ವೇಷನ್ ಕೋಡ್‌ಗಾಗಿ ನಿರೀಕ್ಷಿಸಲಾಗುತ್ತಿದೆ. ಮುಡಾದಿಂದ ರೈಲು ನಿಲ್ದಾಣದ ಒಳಭಾಗದಲ್ಲಿ ನೂತನ ಮೇಲ್ಛಾವಣಿ, ನೆಲಕ್ಕೆ ಮಾರ್ಬಲ್ ಹಾಸುವ ಕಾಮಗಾರಿಗೆ 50 ಲಕ್ಷ ರೂ., ನಿಲ್ದಾಣದ ಹೊರ ಭಾಗದಲ್ಲಿ ಇಂಟರ್‌ಲಾಕ್ ಮತ್ತು ರಸ್ತೆ ಕಾಂಕ್ರೀಟ್ ಕಾಮಗಾರಿಗೆ ನಗರಾಭಿವೃದ್ಧಿ ಇಲಾಖೆಯಿಂದ 75 ಲಕ್ಷ ರೂ. ಅನುದಾನ ಬಿಡುಗಡೆಗೆ ಅನುಮೋದನೆ ಲಭಿಸಿದೆ.
ಸುರತ್ಕಲ್ ಮಂಗಳೂರು ಮಹಾನಗರ ಪಾಲಿಕೆಯ ಪ್ರಮುಖ ಉಪನಗರದಲ್ಲಿ ಎಂಆರ್‌ಪಿಎಲ್, ಬೈಕಂಪಾಡಿ ಕೈಗಾರಿಕ ಪ್ರಾಂಗಣ ಸಹಿತ ಕೈಗಾರಿಕೆ ಹಾಗೂ ವಸತಿ ಬಡಾವಣೆಗಳು ಹೆಚ್ಚಿದ್ದು, ಲಕ್ಷಾಂತರ ಕಾರ್ಮಿಕರು ಇಲ್ಲಿ ಉದ್ಯೋಗವನ್ನು ಕಂಡುಕೊಂಡಿದ್ದು ಮಾತ್ರವಲ್ಲದೆ ಸ್ಥಳೀಯವಾಗಿ ಮುಂಬಯಿ – ಸುರತ್ಕಲ್ ನಡುವೆ ಸ್ಥಳೀಯ ಜನರ ಸಂಚಾರವೂ ಹೆಚ್ಚಿದೆ.