Wednesday, June 3, 2026
Homeತಾಜಾ ಸುದ್ದಿಮೂಢನಂಬಿಕೆಗೆ ಮಾರುಹೋಗಿ ಬಲಿಯಾದ ಕುಟುಂಬಸ್ಥರು: ಒಂದೇ ಕುಟುಂಬದ 9 ಜನರ ಹತ್ಯೆ

ಮೂಢನಂಬಿಕೆಗೆ ಮಾರುಹೋಗಿ ಬಲಿಯಾದ ಕುಟುಂಬಸ್ಥರು: ಒಂದೇ ಕುಟುಂಬದ 9 ಜನರ ಹತ್ಯೆ

- Advertisement -
- Advertisement -

ಮಹಾರಾಷ್ಟ್ರ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಮೈಸಾಳ ಗ್ರಾಮದಲ್ಲಿ ಮೂಢನಂಬಿಕೆ ಮಾರುಹೋಗಿ ಒಂದೇ ಕುಟುಂಬದ 9 ಜನರ ಶವ ಪತ್ತೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಬಹಿರಂಗಕೊಂಡಿದೆ. 9 ಜನರ ಕೊಲೆಗೆ ಮೂಢನಂಬಿಕೆಯೇ ಕಾರಣವೆಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆಡಮ್ ಮಾಹಿತಿ ನೀಡಿದ್ದಾರೆ.

ಇನ್ನು ಈ ಘಟನೆಯ ಬಗ್ಗೆ ಮಿರಜ್ ಗ್ರಾಮೀಣ ಠಾಣೆಯಲ್ಲಿ ಪುಕರಣ ದಾಖಲಾಗಿದ್ದು, ಮೆಹಸಾಲ್ ಗ್ರಾಮದ ಮನೆಯಲ್ಲಿ 3 ದೇಹಗಳು ಒಂದೇ ಕಡೆ ಬಿದಿದ್ದವು. ಉಳಿದ 6 ದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಸಾಂಗಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದರು. ಆದರೆ ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸರಿಗೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ತಿಳಿದು ಬಂದಿದೆ.

ಶಂಕಿತ ಆರೋಪಿಗಳನ್ನು ಅಬ್ಬಾಸ್ ಮೊಹಮ್ಮದ್ ಅಲಿ ಬಾಗವಾನ್ ಮತ್ತು ಧೀರಜ್ ಚಂದ್ರಕಾಂತ್ ಸುರವೇಶ್ ಎಂದು ಗುರುತಿಸಲಾಗಿದ್ದು, ಆರೋಪಿಗಳು ಹಣದ ಆಸೆಗಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಶಂಕಿತ ಆರೋಪಿಗಳು ಆಗಾಗ ವನಮೋರೆ ಕುಟುಂಬದಿಂದ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತಿದ್ದರು ಎಂದು ತನಿಕೆ ವೇಳೆ ತಿಳಿದು ಬಂದಿದೆ. ತನಿಖೆ ವೇಳೆ ದೊರೆತ ಡೆತ್ ನೋಟ್ ನಲ್ಲಿ 25 ಜನರ ಮೇಲೆ ಹಣ ವರ್ಗಾವಣೆ ಮಾಡಿರುವ ಆರೋಪವಿದೆ ಎಂದು ತಿಳಿದು ಬಂದಿರುತ್ತದೆ.

- Advertisement -

Latest News

error: Content is protected !!