Thursday, June 4, 2026
Homeಕರಾವಳಿಸುಳ್ಯ-ಪುತ್ತೂರು ಹೆದ್ದಾರಿ ಸಂಪೂರ್ಣ ಜಲಾವೃತ

ಸುಳ್ಯ-ಪುತ್ತೂರು ಹೆದ್ದಾರಿ ಸಂಪೂರ್ಣ ಜಲಾವೃತ

- Advertisement -
- Advertisement -

ಸುಳ್ಯ: ಇಂದು ಸುರಿದ ಬಾರೀ ಮಳೆಯಿಂದ ಮಾಣಿ- ಮೈಸೂರು ಹೆದ್ದಾರಿಯ ಜಾಲ್ಲೂರಿನಿಂದ ಪೈಚಾರಿ ನ ವರೆಗೆ ಅಲ್ಲಲ್ಲಿ ಚರಂಡಿಯ ಅವ್ಯವಸ್ಥೆಯಿಂದ ನೀರು ರಸ್ತೆಯಲ್ಲೇ ಹರಿದು ನೀರ್‌ಮಾರ್ಗವಾದ ಘಟನೆ ನಡೆದಿದೆ.


ಅಸ್ಕಾರ್, ಬೊಳುಬೈಲು ಗಳಲ್ಲಿ ರಸ್ತೆಯಲ್ಲೇ ನೀರು ನಿಂತು ಕೆರೆಯಂತಾಗಿ ವಾಹನ ಸವಾರರಿಗೆ ರಸ್ತೆ ಯಾವುದು, ಚರಂಡಿ ಯಾವುದು ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಬೊಳುಬೈಲಿನ ಗ್ಯಾರೇಜ್ ಬಳಿಯಲ್ಲಂತೂ ಸಂಪೂರ್ಣ ರಸ್ತೆಯನ್ನು ನೀರು ಆವರಿಸಿತ್ತು.ಹಿಂದಿನ ವರ್ಷಗಳಲ್ಲಿ ಇಲ್ಲಿ ಇದೇ ರೀತಿ ಕೆರೆ ನಿರ್ಮಾಣವಾಗುತ್ತಿತ್ತು.


ಕಳೆದ ವರ್ಷ ಜಾಲ್ಲೂರು ಗ್ರಾ.ಪಂ.ವತಿಯಿಂದ ಚರಂಡಿಯನ್ನು ದುರಸ್ಥಿಗೊಳಿಸಿ ನಂತರ ಈ ಸಮಸ್ಯೆ ಪರಿಹಾರ ವಾಗಿತ್ತು. ಆದರೆ ಈ ವರ್ಷ ಹೆದ್ದಾರಿ ನಿರ್ವಹಣೆ ಮಾಡುವಾಗ ಚರಂಡಿಯ ಕೆಲಸ ಸರಿಯಾಗಿ ನಿರ್ವಹಿಸದಿದ್ದುದೇ ಇದಕ್ಕೆ ಕಾರಣ ಎಂದು ಜನರಾಡಿಕೊಳ್ಳುತ್ತಿದ್ದಾರೆ.

- Advertisement -

Latest News

error: Content is protected !!