Thursday, June 4, 2026
Homeಕರಾವಳಿಮಂಗಳೂರು: ಪಂಪ್‌ವೆಲ್ ಪ್ಲೈಓವರ್ ಮೇಲೆ ಪಲ್ಟಿಯಾದ ಕಾರು; ಚಾಲಕನಿಗೆ ಗಾಯ

ಮಂಗಳೂರು: ಪಂಪ್‌ವೆಲ್ ಪ್ಲೈಓವರ್ ಮೇಲೆ ಪಲ್ಟಿಯಾದ ಕಾರು; ಚಾಲಕನಿಗೆ ಗಾಯ

- Advertisement -
- Advertisement -

ಮಂಗಳೂರು: ಉಡುಪಿ ಕಡೆಯಿಂದ ಕೋಟೆಕಾರು ಬೀರಿಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಂಪ್‌ವೆಲ್ ಫೈ ಓವರ್‌ನಲ್ಲಿ ಪಲ್ಟಿಯಾದ ಘಟನೆ ಮಂಗಳವಾರ ನಡೆದಿದೆ. ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದಾರೆ.


ಉಡುಪಿ ಕಡೆಯಿಂದ ಕೋಟೆಕಾರು ಬೀರಿ ಸಂಚರಿಸುತ್ತಿದ್ದ ಟೊಯೊಟಾ ಇಟಿಯೋಸ್ ಕಾರು ಪಂಪ್‌ವೆಲ್ ಫೈ ಓವರ್‌ನಲ್ಲಿ ಪಲ್ಟಿಯಾಗಿದೆ. ಧಾರಾಕಾರ ಮಳೆ ಇದ್ದ ಕಾರಣ ಮತ್ತು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಚಾಲಕನ ಕೈಗೆ ಗಾಯವಾಗಿದೆ. ಸದ್ಯ ಅವರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಕದ್ರಿ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರನ್ನು ಫೈ ಓವರ್‌ನಿಂದ ಸ್ಥಳಾಂತರ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

- Advertisement -

Latest News

error: Content is protected !!