Saturday, August 29, 2026
Homeಕರಾವಳಿಮಂಗಳೂರು: ಮೀನು ಹಿಡಿಯಲು ಹೋಗಿ ಕೆರೆಗೆ ಬಿದ್ದು, ವ್ಯಕ್ತಿ ಗಂಭೀರ

ಮಂಗಳೂರು: ಮೀನು ಹಿಡಿಯಲು ಹೋಗಿ ಕೆರೆಗೆ ಬಿದ್ದು, ವ್ಯಕ್ತಿ ಗಂಭೀರ

- Advertisement -
- Advertisement -

ಮಂಗಳೂರು: ಮೀನು ಹಿಡಿಯಲು ಹೋಗಿ ಕೆರೆಗೆ ಬಿದ್ದು, ವ್ಯಕ್ತಿ ಗಂಭೀರ ಸ್ಥಿತಿಯಲ್ಲಿರುವ ಘಟನೆ ಗುರುಪುರ ಶ್ರೀ ಸದಾಶಿವ ದೇವಸ್ಥಾನದ ಸಮೀಪವಿರುವ ಕೆರೆಯಲ್ಲಿ ನಡೆದಿದೆ.

 ಕೊಟ್ಟಾರಿ ಗುಡ್ಡೆಯ ಪ್ರವೀಣ್‌ (45) ಅವರು ನೀರಿಗೆ ಬಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಗುರುಪುರ ಕೊಟ್ಟಾರಿ ಗುಡ್ಡೆಯ ಗ್ರೇಶನ್‌ ಅವರು ಪ್ರವೀಣ್‌ ಅವರನ್ನು ಗುರುಪುರ ಶ್ರೀ ಸದಾಶಿವ ದೇವಸ್ಥಾನದ ಸಮೀಪ ಇರುವ ಕೆರೆಯಲ್ಲಿ ಮೀನು ಹಿಡಿಯುಲು ಕರೆದುಕೊಂಡು ಹೋಗಿದ್ದರು. ಕೆರೆಯಲ್ಲಿ ಬಲೆಯನ್ನು ಹಾಕಿ ವಾಪಸಾಗುವ ವೇಳೆ ಪ್ರವೀಣ್‌ ಬಲೆಗೆ ಸಿಲುಕಿಕೊಂಡ ಕಾರಣ ಅಲ್ಲೇ ಮುಳುಗಿದ್ದಾರೆ. ಸುಮಾರು 9 ಗಂಟೆಯ ವೇಳೆಗೆ ಅವರನ್ನು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವಿವಾಹಿತರಾಗಿದ್ದ ಅವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.

- Advertisement -

Latest News

error: Content is protected !!