Thursday, June 4, 2026
Homeತಾಜಾ ಸುದ್ದಿಸುಳ್ಯ: ರಾಜಾರಾಂಪುರ ಶಾಲಾ ಕಟ್ಟಡದಲ್ಲಿ ಬಿರುಕು; ಜನಪ್ರತಿನಿಧಿಗಳು ಹಾಗು ಇಂಜಿನಿಯರ್ ಗಳಿಂದ ಪರಿಶೀಲನೆ

ಸುಳ್ಯ: ರಾಜಾರಾಂಪುರ ಶಾಲಾ ಕಟ್ಟಡದಲ್ಲಿ ಬಿರುಕು; ಜನಪ್ರತಿನಿಧಿಗಳು ಹಾಗು ಇಂಜಿನಿಯರ್ ಗಳಿಂದ ಪರಿಶೀಲನೆ

- Advertisement -
- Advertisement -

ಸುಳ್ಯ: ಗೂನಡ್ಕ ರಾಜರಾಂಪುರ ಸರಕಾರಿ ಶಾಲಾ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ.


ಶಾಲಾ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನಲೆ ಯಲ್ಲಿ ಜನಪ್ರತಿನಿಧಿಗಳು ಹಾಗು ಇಂಜಿನಿಯರ್ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಮಣಿಕಂಠ, ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ರೈ, ಎಸ್.ಕೆ. ಹನೀಫ್,ಅನುಪಮಾ ಹಾಗೂ ಎಸ್.ಡಿ.ಎಮ್.ಸಿ.ಅಧ್ಯಕ್ಷರ ರವಿ, ಸಜ್ಜನ ಪ್ರತಿಷ್ಠಾನದ ಕಾರ್ಯದರ್ಶಿ ರಹೀಂ ಬೀಜದಕಟ್ಟೆ, ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರು ಹಾಜರಿದ್ದರು.


ಶಾಲಾ ಕಟ್ಟಡವನ್ನು ಪರಿಶೀಲಿಸಿ ಈ ಶಾಲಾ ಕಟ್ಟಡದಲ್ಲಿ ತರಗತಿ ನಡೆಸುವುದು ಸುರಕ್ಷಿತವಲ್ಲ ಎಂದು ಇಂಜಿನಿಯ ರ್‌ಗಳು ತಿಳಿಸಿದ್ದಾರೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್‌ ತಿಳಿಸಿದ್ದಾರೆ.

- Advertisement -

Latest News

error: Content is protected !!