Thursday, June 4, 2026
Homeಕರಾವಳಿಮಂಗಳೂರಿನಿಂದ ಕೊಯಂಬತ್ತೂರಿಗೆ ಸಾಗುತ್ತಿದ್ದ ರೈಲಿಗೆ ನವಿಲು ಡಿಕ್ಕಿ, ಚಾಲಕನಿಗೆ ಗಾಯ

ಮಂಗಳೂರಿನಿಂದ ಕೊಯಂಬತ್ತೂರಿಗೆ ಸಾಗುತ್ತಿದ್ದ ರೈಲಿಗೆ ನವಿಲು ಡಿಕ್ಕಿ, ಚಾಲಕನಿಗೆ ಗಾಯ

- Advertisement -
- Advertisement -

ಮಂಗಳೂರು: ಮಂಗಳೂರಿನಿಂದ ಕೊಯಂಬತ್ತೂರಿಗೆ ಸಾಗುತ್ತಿದ್ದ ರೈಲಿಗೆ ನವಿಲು ಡಿಕ್ಕಿಯಾಗಿ ಇಂಜಿನ್ ನ ಗಾಜು ಒಡೆದು ಚಾಲಕ ಗಾಯಗೊಂಡ ಘಟನೆ ನಡೆದಿದೆ.

ಬೆಳಗ್ಗೆ 9 ಗಂಟೆಗೆ ಮಂಗಳೂರಿನಿಂದ ಕೊಯಂಬತ್ತೂರು ಕಡೆ ಸಾಗುತ್ತಿದ್ದ ಕೊಯಂಬತೂರ್ “ಎಕ್ಸ್ ಪ್ರೆಸ್ ಸ್ಪೆಷಲ್ ಟ್ರೈನ್” ಗೆ ಕುಂಬ್ಳೆ ಕಾಸರಗೋಡು ನಡುವೆ ನವಿಲು ಢಿಕ್ಕಿಯಾಗಿ ರೈಲಿನ ಗ್ಲಾಸ್ ಒಡೆದು ರೈಲು ಚಾಲಕ ಶಾಜಿ ಎಂಬವರಿಗೆ ಸಣ್ಣ ಗಾಯವಾಗಿದೆ.

ಒಂದು ಗಂಟೆ ಕಾಲ ರೈಲು ಕಾಸರಗೋಡು ನಿಲ್ದಾಣದಲ್ಲಿ ನಿಂತು ಬಳಿಕ ಬೇರೆ ಇಂಜಿನ್ ಜೋಡಿಸಿ ಪ್ರಯಾಣ ಮುಂದುವರಿಸಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!