Sunday, June 7, 2026
Homeಚಿಕ್ಕಮಗಳೂರುಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭೂಕಂಪನ

ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭೂಕಂಪನ

- Advertisement -
- Advertisement -

ಹಾಸನ/ಕೊಡಗು: ಹಾಸನ ಹಾಗೂ ಕೊಡಗು ಜಿಲ್ಲೆಯ ಕೆಲಭಾಗಗಳಲ್ಲಿ ಭೂಕಂಪನವಾಗಿರುವ ಅನುಭವ ಸ್ಥಳೀಯರಿಗುಂಟಾಗಿದೆ. ಹಾಸನ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಕಂಪನವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಕಲಗೂಡು ತಾಲೂಕಿನ ಹಣೆಮಾರನಹಳ್ಳಿ, ಕಾರಹಳ್ಳಿ, ಮುದ್ದನಹಳ್ಳಿಯಲ್ಲಿ ಇಂದು ಬೆಳಗಿನಜಾವ 4.38ಕ್ಕೆ ಭೂಕಂಪನವಾಗಿದೆ.

ಅರಕಲಗೂಡು ತಾಲೂಕಿನ ಹಳ್ಳಿಗಳಲ್ಲಿ ಭೂಮಿ ಕಂಪಿಸಿದ್ದು, ಜನ ಆತಂಕಗೊಂಡು ತಕ್ಷಣವೇ ಮನೆಯಿಂದ ಹೊರಬಂದಿದ್ದಾರೆ. ಇನ್ನೂ ಕೊಡಗಿನಲ್ಲೂ ಅದೇ ಸಮಯದಲ್ಲಿ ಇಂದು ಬೆಳಗ್ಗೆ, ಭೂಕಂಪನವಾಗಿದ್ದು ಕೊಡಗಿನ ಗೌಡಳ್ಳಿ, ಮೆಗಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಕೊಡಗಿನ ಜನರಿಗಾಗಿದೆ.

ಭೂಕಂಪನದ ಕೆಂದ್ರ ಬಿಂದು ಹಾಸನವಗಿದ್ದು, ಒಂದೇ ಸಮಯದಲ್ಲಿ ಎರಡು ಕಡೆಗಳಲ್ಲಿಯೂ ಭೂಕಂಪನದ ಅನುಭವ ಅನೇಕ ಜನರಿಗಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!