Saturday, June 6, 2026
Homeತಾಜಾ ಸುದ್ದಿಬೆಳ್ತಂಗಡಿ: ನಿಂತಿದ್ದ ಆಟೋ ರಿಕ್ಷಾಗೆ ಇನ್ನೊಂದು ರಿಕ್ಷಾ ಡಿಕ್ಕಿ: ಎರಡೂ ವಾಹನ ಜಖಂ

ಬೆಳ್ತಂಗಡಿ: ನಿಂತಿದ್ದ ಆಟೋ ರಿಕ್ಷಾಗೆ ಇನ್ನೊಂದು ರಿಕ್ಷಾ ಡಿಕ್ಕಿ: ಎರಡೂ ವಾಹನ ಜಖಂ

- Advertisement -
- Advertisement -

ಬೆಳ್ತಂಗಡಿ: ವ್ಯಾಪ್ತಿಯ ಕೊಯ್ಯರು ಕ್ರಾಸ್ ಬಳಿ ನಿಂತಿದ್ದ ಆಟೋ ರಿಕ್ಷಾಗೆ ಇನ್ನೊಂದು ರಿಕ್ಷಾ ಡಿಕ್ಕಿಹೊಡೆದಿರುವ ಘಟನೆ ಜೂ.22 ರಂದು ಸಂಭವಿಸಿದೆ.


ಕೊಳ್ಳೂರು ಕ್ರಾಸ್ ಬಳಿ ರಿಕ್ಷಾವೊಂದು ಬ್ರೇಕ್ ಹಾಕಿದ ವೇಳೆ ಹಿಂಬದಿಯಿಂದ ಬರುತ್ತಿದ್ದ ಆಟೋ ರಿಕ್ಷಾ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಎರಡೂ ರಿಕ್ಷಾ ದಲ್ಲಿದ್ದ ಪ್ರಯಾಣಿಕರು ಹಾಗೂ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಡಿಕ್ಕಿ ಹೊಡೆದ ರಭಸಕ್ಕೆ ಆಟೋ ರಿಕ್ಷಾದ ಎದುರಿನ ಗಾಜುಗಳು ಪುಡಿ ಪುಡಿಯಾಗಿದೆ, ಎರಡೂ ವಾಹನಗಳೂ ಜಖಂ ಗೊಂಡಿವೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿ, ತನಿಖೆ ನಡೆಸಿದರು.

- Advertisement -

Latest News

error: Content is protected !!