Friday, June 5, 2026
Homeತಾಜಾ ಸುದ್ದಿನನ್ಗೆ ಅವಳು ಬೇಕು, ಇವಳು ಬೇಕು : ಇಬ್ಬರನ್ನು ಪ್ರೇಯಸಿಯರನ್ನು ಒಟ್ಟಿಗೆ ವರಿಸಿದ ಯುವಕ

ನನ್ಗೆ ಅವಳು ಬೇಕು, ಇವಳು ಬೇಕು : ಇಬ್ಬರನ್ನು ಪ್ರೇಯಸಿಯರನ್ನು ಒಟ್ಟಿಗೆ ವರಿಸಿದ ಯುವಕ

- Advertisement -
- Advertisement -

ಜಾರ್ಖಂಡ್‌: ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಇಬ್ಬರೂ ಪ್ರೇಯಸಿಯರನ್ನು ಏಕಕಾಲದಲ್ಲೇ ಮದುವೆಯಾಗಿರುವ ಘಟನೆ ಜಾರ್ಖಂಡ್‌ನ ಲೋಹರ್ದಗಾ ಎಂಬ ಹಳ್ಳಿಯಲ್ಲಿ ನಡೆದಿದೆ.

ಲೋಹರ್ದಗಾದ ಭಾಂದ್ರಾ ಬ್ಲಾಕ್‌ನ ಬಂಡಾ ಗ್ರಾಮದ ನಿವಾಸಿ ಸಂದೀಪ್ ಎಂಬಾತ ಕುಸುಮ್ ಲಾಕ್ರಾ ಮತ್ತು ಸ್ವಾತಿ ಕುಮಾರಿ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದ. ಅವರಿಬ್ಬರೂ ಕೂಡ ಸಂದೀಪ್‌ನನ್ನು ಪ್ರೀತಿಸುತ್ತಿದ್ದರು. ಇದೀಗ ಇಬ್ಬರನ್ನೂ ಒಂದೇ ಸಮಯದಲ್ಲಿ ಸಂದೀಪ್ ಮದುವೆಯಾಗಿದ್ದಾನೆ.

ಸಂದೀಪ್ ಮತ್ತು ಕುಸುಮ್ ಮೂರು ವರ್ಷಗಳಿಂದ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಇದೀಗ ಅವರಿಬ್ಬರಿಗೂ ಒಂದು ಮಗು ಕೂಡ ಇದೆ. ಒಂದು ವರ್ಷದ ಹಿಂದೆ ಸಂದೀಪ್ ಪಶ್ಚಿಮ ಬಂಗಾಳದ ಇಟ್ಟಿಗೆ ಗೂಡು ಕೆಲಸಕ್ಕೆ ಹೋಗಿದ್ದರು. ಆಗ ಅಲ್ಲಿಯೇ ಕೆಲಸಕ್ಕೆ ಬಂದಿದ್ದ ಸ್ವಾತಿಕುಮಾರಿಯನ್ನು ಸಂದೀಪ್ ಭೇಟಿಯಾಗಿದ್ದಾನೆ. ಕೊನೆಗೆ ಇದು ಪ್ರೀತಿಗೆ ತಿರುಗಿತು. ಇವರಿಬ್ಬರ ಸಂಬಂಧ ತಿಳಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಇದನ್ನು ವಿರೋಧಿಸಿದರು.

ಸರಣಿ ಜಗಳದ ನಂತರ, ಗ್ರಾಮಸ್ಥರು ಪಂಚಾಯತಿಗೆ ಕರೆದರು. ಸಂದೀಪ್ ಇಬ್ಬರೂ ಮಹಿಳೆಯರನ್ನು ಮದುವೆಯಾಗಬೇಕೆಂದು ತೀರ್ಮಾನಿಸಲಾಯಿತು. ನಂತರ ಇದಕ್ಕೆ ಮಹಿಳೆಯರಾಗಲಿ ಅಥವಾ ಅವರ ಕುಟುಂಬದವರಾಗಲಿ ವಿರೋಧಿಸಲಿಲ್ಲ. ನಂತರ ಸಂದೀಪ್ ಇಬ್ಬರು ಮಹಿಳೆಯರನ್ನೂ ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿದ್ದಾನೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂದೀಪ್, ‘ಇಬ್ಬರು ಮಹಿಳೆಯರನ್ನು ಒಟ್ಟಿಗೆ ಮದುವೆಯಾಗಲು ಕಾನೂನು ಅಡ್ಡಿಯಾಗಬಹುದು. ಆದರೆ, ನಾನು ಇಬ್ಬರನ್ನೂ ಪ್ರೀತಿಸುತ್ತೇನೆ. ನಾನು ಇಬ್ಬರನ್ನೂ ಬಿಡಲು ಸಾಧ್ಯವಿಲ್ಲ’ ಎಂದಿದ್ದಾನೆ.

- Advertisement -

Latest News

error: Content is protected !!