Friday, June 5, 2026
Homeತಾಜಾ ಸುದ್ದಿಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಸುಪ್ರಿಯಾ ಶ್ರೀನಾಥ್ ನೇಮಕ

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಸುಪ್ರಿಯಾ ಶ್ರೀನಾಥ್ ನೇಮಕ

- Advertisement -
- Advertisement -

ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷರನ್ನಾಗಿ ಸುಪ್ರಿಯಾ ಶ್ರೀನಾಥ್ ಅವರನ್ನು ನೇಮಿಸಲಾಗಿದೆ.

ಈ ಮೊದಲು ಅಧ್ಯಕ್ಷರಾಗಿದ್ದ ರೋಹನ್ ಗುಪ್ತಾ ಅವರು ಪಕ್ಷದ ವಕ್ತಾರರಾಗಿ ನೇಮಕಗೊಂಡಿರುವ ಕಾರಣ, ಅವರ ಸ್ಥಾನಕ್ಕೆ ಮಾಜಿ ಪತ್ರಕರ್ತೆ ಸುಪ್ರಿಯಾ ಶ್ರೀನಾಥ್ ಅವರು ನೇಮಕಗೊಂಡಿದ್ದಾರೆ.


ಪಕ್ಷವು ಹೊಸ ಸಂವಹನ ವಿಭಾಗವನ್ನು ರಚಿಸಿದ ನಂತರ ಮತ್ತು ಅದರ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಜೈರಾಮ್ ರಮೇಶ್ ಅವರನ್ನು ನೇಮಿಸಿದ ನಂತರ ಈ ಬದಲಾವಣೆಗಳನ್ನು ಮಾಡಲಾಗಿದೆ.

- Advertisement -

Latest News

error: Content is protected !!