- Advertisement -
- Advertisement -
ಉಡುಪಿ: ರಾಜಕೀಯ ಪ್ರತಿಸ್ಪರ್ಧಿಗಳಾಗಿದ್ದ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಮತ್ತು ಹಾಲಿ ಶಾಸಕ ರಘುಪತಿ ಭಟ್ ಅವರು ಜೂನ್ 19ರ ಭಾನುವಾರದಂದು ಬೆಳಗ್ಗೆ ಬೈಕ್ ರೌಂಡ್ಸ್ ಮಾಡಿದ್ದಾರೆ.
ಬ್ರಹ್ಮಾವರದಲ್ಲಿ ಗ್ರಾಮಾಂತರ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿಯಲ್ಲಿ ಉಡುಪಿ ಕ್ಷೇತ್ರದ ಮಾಜಿ ಹಾಗೂ ಹಾಲಿ ಶಾಸಕರಿಬ್ಬರೂ ಒಟ್ಟಿಗೆ ಬುಲೆಟ್ ರೈಡ್ ನಡೆಸಿದರು. ಶಾಸಕ ರಘುಪತಿ ಭಟ್ ಬುಲೆಟ್ ಚಲಾಯಿಸಿದರೆ, ಪ್ರಮೋದ್ ಮಧ್ವರಾಜ್ ಸಹ ಸವಾರರಾಗಿ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದರು.
ಕೆಲ ವರ್ಷಗಳಿಂದ ಪ್ರಮೋದ್ ಮಧ್ವರಾಜ್ ಮತ್ತು ರಘುಪತಿ ಭಟ್ ರಾಜಕೀಯ ಪ್ರತಿಸ್ಪರ್ಧಿಗಳಾಗಿದ್ದರು. ಆದರೆ ಬಾಲ್ಯದಲ್ಲಿ ಇವರಿಬ್ಬರೂ ಸಹಪಾಠಿಗಳಾಗಿದ್ದರು. ವರ್ಷಗಳಲ್ಲಿ ಅವರು ರಾಜಕೀಯ ಪ್ರತಿಸ್ಪರ್ಧಿಗಳಾಗಿಯೂ ಬದಲಾದರು. ಇತ್ತೀಚೆಗೆ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರಿದ್ದು ಮತ್ತೆ ಸಹಪಾಠಿಗಳಿಬ್ಬರು ಒಂದಾಗಿದ್ದಾರೆ.
- Advertisement -