Friday, June 5, 2026
Homeಕೊಡಗುಕೊಡಗು:ಕೆಲಸ ಮಾಡುತ್ತಿದ್ದ ಮನೆಯಲ್ಲೇ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ ದಂಪತಿ

ಕೊಡಗು:ಕೆಲಸ ಮಾಡುತ್ತಿದ್ದ ಮನೆಯಲ್ಲೇ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ ದಂಪತಿ

- Advertisement -
- Advertisement -

ಕೊಡಗು:ಕೆಲಸ ಮಾಡುತ್ತಿದ್ದ ಮನೆಯಲ್ಲೇ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿ ದಂಪತಿ ಸಿಕ್ಕಿ ಬಿದ್ದ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ನಡೆದಿದೆ.

ಬಾಳೆಲೆ ಸಮೀಪ ಸುಳುಗೋಡು ಗ್ರಾಮದ ನಿವಾಸಿ ಕಳ್ಳಿಚಂಡ ಅಪ್ಪಯ್ಯನವರು(ಕಾಶಿ) ಅವರು ತನ್ನ ಪತ್ನಿ ಹಾಗೂ ತಂದೆಯೊಂದಿಗೆ ಬೆಂಗಳೂರಿಗೆ ಜೂನ್ 10 ರಂದು ಬೆಂಗಳೂರಿಗೆ ತೆರಳಿದ್ದರು.

ಈ  ವೇಳೆ ಅವರ ಮನೆಯಲ್ಲಿ ಕೆಲಸಕ್ಕಿದ್ದ ಹಾಸನ ಮೂಲದ ಗಂಡ ಹೆಂಡತಿ ವಸಂತ ಹಾಗೂ ರೇಣುಕಾ ಮನೆಯಲ್ಲಿದ್ದ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಜೂನ್ 14 ರಂದು ರಾತ್ರಿ ಕಳ್ಳಿಚಂಡ ಕಾಶಿ ಅವರು ಬೆಂಗಳೂರಿನಿಂದ ಮರಳಿ ನೋಡುವಾಗ ಮನೆಯಲ್ಲಿದ್ದ ಏಳೂವರೆ ಲಕ್ಷ ರೂ ಮೌಲ್ಯ ಚಿನ್ನಾಭರಣ ಹಾಗೂ ಇತರೆ  ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವುದು ಗೊತ್ತಾಗಿದೆ.

 ಜೂನ್ 15 ರಂದು ಈ ಕುರಿತು ಪೊನ್ನಂಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊನ್ನಂಪೇಟೆ ಪೊಲೀಸರು ಬೆಂಗಳೂರಿನಲ್ಲಿ ಆರೋಪಿಗಳಾದ ವಸಂತ ಮತ್ತು ರೇಣುಕಾ ಅವರನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!