Wednesday, June 3, 2026
Homeಕರಾವಳಿಬಂಟ್ವಾಳ: ಹೆದ್ದಾರಿ ಕೆಲಸ ಪ್ರಾರಂಭಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ

ಬಂಟ್ವಾಳ: ಹೆದ್ದಾರಿ ಕೆಲಸ ಪ್ರಾರಂಭಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ

- Advertisement -
- Advertisement -

ಭೂಮಾಲೀಕರಿಗೆ ಸಮಾಧಾನಕರ ಪರಿಹಾರ ಕೊಡಿಸುವ ಜವಾಬ್ದಾರಿ ಒಬ್ಬ ಸಂಸದನಾಗಿ ನನ್ನ ಮತ್ತು ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಮೇಲೆ ಇದೆ. ಇದಕ್ಕೆ ನಾವು ಬದ್ಧರಾಗಿದ್ದು ಕೂಡಲೇ ಹೆದ್ದಾರಿ ಕೆಲಸ ಪ್ರಾರಂಭಿಸಿ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ದಿಲೀಪ್ ಬಿಲ್ಟಾನ್ ಕಂಪೆನಿಯವರಿಗೆ ಸೂಚಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 169ರ ಭೂಮಾಲೀಕರ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.bಇದಕ್ಕೆ ದಿಲೀಪ್ ಕಂಪೆನಿ ಪ್ರತಿಕ್ರಿಯೆ ನೀಡಿ, ‘ಸಂಸದರ ಅಪೇಕ್ಷೆ ಮೇರೆಗೆ ಆದಷ್ಟು ಬೇಗನೆ ಮರಗಳನ್ನು ಮತ್ತು ತಂತಿ ಕಂಬಗಳನ್ನು ತೆರವುಗೊಳಿಸಿ ಹೆದ್ದಾರಿ ಅಭಿವೃದ್ಧಿಯ ಕೆಲಸ ಪ್ರಾರಂಭಿಸುತ್ತೇವೆ’ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!