Sunday, August 30, 2026
Homeಕರಾವಳಿಬಿಸಿಯೂಟ ತಯಾರಿಸುತ್ತಿದ್ದಾಗ ಕಾಲು ಜಾರಿ ಸಾಂಬಾರ್ ಪಾತ್ರೆಗೆ ಬಿದ್ದು ಅಡುಗೆ ಸಹಾಯಕಿ ಸಾವು: ಪುತ್ತೂರಿನ ಕಸ್ಬಾ...

ಬಿಸಿಯೂಟ ತಯಾರಿಸುತ್ತಿದ್ದಾಗ ಕಾಲು ಜಾರಿ ಸಾಂಬಾರ್ ಪಾತ್ರೆಗೆ ಬಿದ್ದು ಅಡುಗೆ ಸಹಾಯಕಿ ಸಾವು: ಪುತ್ತೂರಿನ ಕಸ್ಬಾ ಸೈಂಟ್ ವಿಕ್ಟರ್ ಶಾಲೆಯಲ್ಲಿ ಘಟನೆ

- Advertisement -
- Advertisement -

ಪುತ್ತೂರು: ಬಿಸಿಯೂಟ ಮಾಡುತ್ತಿದ್ದಾಗ ಕಾಲು ಜಾರಿ ಸಾಂಬಾರ್ ಪಾತ್ರೆಗೆ ಬಿದ್ದು ಅಡುಗೆ ಸಹಾಯಕಿ ಸಾವನ್ನಪ್ಪಿರುವ ಘಟನೆ ಪುತ್ತೂರು ಸೈಂಟ್ ವಿಕ್ಟರ್ ಶಾಲೆಯಲ್ಲಿ ನಡೆದಿದೆ. ಅಗ್ನೆಸ್ ಪ್ರಮೀಳಾ ಡಿಸೋಜಾ (37) ಮೃತ ದುರ್ದೈವಿ.

ಅಗ್ನೆಸ್ ಪ್ರಮೀಳಾ ಡಿಸೋಜಾ ಮೇ .30 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಕ್ಕಳಿಗೆ ಬಿಸಿಯೂಟ ತಯಾರಿಸುತ್ತಿದ್ದಾಗ ಅಡುಗೆ ಮನೆಯ ಬಾಗಿಲ ಬಳಿ ತಯಾರು ಮಾಡಿ ಇಟ್ಟಿದ್ದ ಸಾಂಬಾರ್ ಪಾತ್ರೆಗೆ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು  ಮೃತಪಟ್ಟಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!