Sunday, August 30, 2026
Homeಕರಾವಳಿಬೆಳ್ತಂಗಡಿ: ವರುಣನ ಆರ್ಭಟಕ್ಕೆ ರಸ್ತೆಗೆ ಉರುಳಿ ಬಿದ್ದ ಮರ :ವಿದ್ಯುತ್ ಕಂಬಗಳಿಗೆ ಹಾನಿ

ಬೆಳ್ತಂಗಡಿ: ವರುಣನ ಆರ್ಭಟಕ್ಕೆ ರಸ್ತೆಗೆ ಉರುಳಿ ಬಿದ್ದ ಮರ :ವಿದ್ಯುತ್ ಕಂಬಗಳಿಗೆ ಹಾನಿ

- Advertisement -
- Advertisement -

ಬೆಳ್ತಂಗಡಿ:ತಾಲೂಕಿನಲ್ಲಿ ಮಧ್ಯಾಹ್ನ ನಂತರ ಭಾರೀ ಮಳೆ ಸುರಿದಿದ್ದು ಕೆಲವೆಡೆ ಗಾಳಿ ಸಹಿತ ಮಳೆಯಾಗಿದೆ. ಬೆಳ್ತಂಗಡಿಯ  ಹಳೇ ಸೇತುವೆ ರಸ್ತೆಯ ಅಂಬೇಡ್ಕರ್ ಭವನದ ಬಳಿ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದು ವಿದ್ಯುತ್ ಕಂಬಗಳು ಹಾಗೂ ತಂತಿಗಳು ತುಂಡಾಗಿ ಬಿದ್ದು ವಾಹನ ಸಂಚಾರಕ್ಕೆ ತಡೆಯುಂಟಾಗಿದೆ.

ಇಂದು ಸಂಜೆ ಸುಮಾರು 5.30 ರ ಸುಮಾರಿಗೆ ಮರ ಉರುಳಿಬಿದ್ದಿದೆ.   ಹಗಲು ಹೊತ್ತಿನಲ್ಲಿ ಈ ಮರದ ಅಡಿಯಲ್ಲಿ ಸಾಕಷ್ಟು ವಾಹನ ಸಂಚಾರವಿದ್ದು,  ಅದೃಷ್ಟವಶಾತ್ ಮರ ಸಂಜೆ ಉರುಳಿ ಬಿದ್ದ ಸಂದರ್ಭ ಯಾವುದೇ ವಾಹನ ಅಥವಾ ಜನ ಸಂಚಾರ ಇಲ್ಲದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

 ಈ ಬಗ್ಗೆ ಸ್ಥಳೀಯರು ಕೂಡಲೇ  ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದ್ದು, ಮೆಸ್ಕಾಂ ಸಿಬ್ಬಂದಿ ಬಂದು ಪರಿಶೀಲಿಸಿದ್ದಾರೆ.  ರಾತ್ರಿಯಾದ್ದರಿಂದ ತುಂಡಾದ ಕಂಬ ಹಾಗೂ ತಂತಿ ಬದಲಾವಣೆ ಮಾಡಲು ಅಸಾಧ್ಯವಾದ್ದರಿಂದ  ಮರ ತೆರವು ಕಾರ್ಯ ಹಾಗೂ ದುರಸ್ತಿ  ಕಾಮಗಾರಿ ನಾಳೆ ಮುಂದುವರಿಯಲಿದೆ.

- Advertisement -

Latest News

error: Content is protected !!