Friday, June 5, 2026
Homeತಾಜಾ ಸುದ್ದಿಮತದಾನದ ವೇಳೆ ಹೆಚ್‌.ಡಿ.ರೇವಣ್ಣ ಹೈಡ್ರಾಮಾ: ಮತ ಅಸಿಂಧುಗೊಳಿಸುವಂತೆ ಬಿಜೆಪಿ ಆಗ್ರಹ

ಮತದಾನದ ವೇಳೆ ಹೆಚ್‌.ಡಿ.ರೇವಣ್ಣ ಹೈಡ್ರಾಮಾ: ಮತ ಅಸಿಂಧುಗೊಳಿಸುವಂತೆ ಬಿಜೆಪಿ ಆಗ್ರಹ

- Advertisement -
- Advertisement -

ಬೆಂಗಳೂರು: ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಮತವನ್ನು ಅಸಿಂಧುಗೊಳಿಸುವಂತೆ ಬಿಜೆಪಿ ಆಗ್ರಹಿಸಿದೆ. ರೇವಣ್ಣ ಮತ ಚಲಾಯಿಸುವ ಸಂದರ್ಭದಲ್ಲಿ ತಮ್ಮ ಮತವನ್ನು ಕಾಂಗ್ರೆಸ್ ಚುನಾವಣಾ ಏಜೆಂಟ್ ಡಿ.ಕೆ.ಶಿವಕುಮಾರ್ ಅವರಿಗೆ ತೋರಿಸಿ ಮತ ಹಾಕಿದ್ದಾರೆ. ಇದು ಚುನಾವಣಾ ನಿಯಮದ ಉಲ್ಲಂಘನೆ. ಹೀಗಾಗಿ ಅವರ ಮತ ಅಸಿಂಧುಗೊಳಿಸುವಂತೆ ಬಿಜೆಪಿ ಚುನಾವಣಾಧಿಕಾರಿಗೆ ದೂರು ನೀಡಿದೆ.

ಆದರೆ ಈ ಆರೋಪವನ್ನು ರೇವಣ್ಣ ನಿರಾಕರಿಸಿದ್ದಾರೆ. ನಾನು ಡಿಕೆ ಶಿವಕುಮಾರ್ ಗೆ ತೋರಿಸಿ ಮತ ಹಾಕಿಲ್ಲ. ಪುಟ್ಟರಾಜು ಅವರಿಗೆ ತೋರಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

- Advertisement -

Latest News

error: Content is protected !!