Wednesday, June 3, 2026
Homeತಾಜಾ ಸುದ್ದಿಕುಂಬಳೆ: ಉಪ್ಪಳಕ್ಕೆಂದು ತೆರಳಿದ ವ್ಯಕ್ತಿ ನಾಪತ್ತೆ: ಮತಾಂತರವಾಗಿರುವ ಬಗ್ಗೆ ಸ್ಥಳೀಯರಿಂದ ಶಂಕೆ ವ್ಯಕ್ತ

ಕುಂಬಳೆ: ಉಪ್ಪಳಕ್ಕೆಂದು ತೆರಳಿದ ವ್ಯಕ್ತಿ ನಾಪತ್ತೆ: ಮತಾಂತರವಾಗಿರುವ ಬಗ್ಗೆ ಸ್ಥಳೀಯರಿಂದ ಶಂಕೆ ವ್ಯಕ್ತ

- Advertisement -
- Advertisement -

ಕುಂಬಳೆ: ಮುಳ್ಳೆರಿಯಾದ ಆದೂರು ಕೈತೋಡು ನಿವಾಸಿ ಜಯರಾಮ್ (46) ಅವರು ಕಳೆದ ಮಾರ್ಚ್ 18ರಂದ ಉಪ್ಪಳಕ್ಕೆಂದು ತೆರಳಿದವರು ನಾಪತ್ತೆಯಾಗಿದ್ದಾರೆ. ಅವರು ಮತಾಂತರವಾಗಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತ ಪಡಿಸಿದ್ದಾರೆ.

ಮೇಸ್ತ್ರಿ ಕೆಲಸದ ಅವಿವಾಹಿತರಾಗಿದ್ದ ಅವರು ಸಹೋದರರಿಂದ ಜಾಗದ ಪಾಲು ಪಡೆದು ಅದನ್ನು ಮಾರಾಟ ಮಾಡಿ ಚೆಕ್‌ಪೋಸ್ಟ್ ಬಳಿಯ ಬಾಡಿಗೆ ಕಟ್ಟಡದಲ್ಲಿ ವಾಸವಾಗಿದ್ದರು. ಕೆಲಸಕ್ಕೆ ಹೋಗುತ್ತಿದ್ದಾಗ ಅನ್ಯ ಮತದವರ ಮನೆಯ ವಿಚ್ಛೇದಿತ ಮಹಿಳೆಯೊಂದಿಗೆ ಸ್ನೇಹ ಹೊಂದಿದ್ದರು. ಮತಾಂತರಗೊಳ್ಳದೆ ವಿವಾಹ ಅಸಾಧ್ಯ ಎಂದು ಆಕೆ ಹೇಳಿದ್ದರಿಂದ ಕೇರಳದ ಪೊನ್ನಾನಿಯ ಧಾರ್ಮಿಕ ಕೇಂದ್ರಕ್ಕೆ ತೆರಳಿ ಮತಾಂತರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಅವರಲ್ಲಿ ಗೆಳೆತನವಿದ್ದ ಮಹಿಳೆಯೂ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಜಯರಾಮ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!