Friday, June 5, 2026
Homeಕರಾವಳಿಮಂಗಳೂರು: ಪಾರ್ಕ್ ಮಾಡಲಾಗಿದ್ದ ಸ್ಕೂಟರ್ ಕಳವು; ದೂರು ದಾಖಲು

ಮಂಗಳೂರು: ಪಾರ್ಕ್ ಮಾಡಲಾಗಿದ್ದ ಸ್ಕೂಟರ್ ಕಳವು; ದೂರು ದಾಖಲು

- Advertisement -
- Advertisement -

ಮಂಗಳೂರು: ನಗರದ ಪಂಪ್‌ವೆಲ್‌ನ ಕಟ್ಟಡವೊಂದರ ಬಳಿ ನಿಲ್ಲಿಸಿದ್ದಮರೋಳಿಯ ಜಾಯ್ಸನ್ ಗೋವಿಯಸ್ ಎಂಬುವವರ ಸ್ಕೂಟರ್ ಕಳವಾದ ಬಗ್ಗೆ ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಯ್ಸನ್ ಪಂಪ್‌ವೆಲ್ ಜಂಕ್ಷನ್‌ನಲ್ಲಿ ಫಾಸ್ಟ್‌ಫುಡ್ ಅಂಗಡಿ ಹೊಂದಿದ್ದು ಅವರ ಅಣ್ಣನ ಸ್ಕೂಟರ್‌ನ್ನು ಬಳಸುತ್ತಿದ್ದರು. ಮೇ 31ರಂದು ರಾತ್ರಿ 8ಕ್ಕೆ ಅಂಗಡಿ ಬಳಿ ಸ್ಕೂಟರ್ ಪಾರ್ಕ್ ಮಾಡಿದ್ದರು. ರಾತ್ರಿ 11ಕ್ಕೆ ಮನೆಗೆ ಹೋಗಲೆಂದು ಸ್ಕೂಟರ್‌ಗೆ ಕೀ ಹಾಕಿ ವಾಪಸ್ ಅಂಗಡಿ ಬಳಿಗೆ ಬಂದು ಅಂಗಡಿಯನ್ನು ಮುಚ್ಚಿ ಸ್ಕೂಟರ್ ಬಳಿಗೆ ತೆರಳಿದಾಗ ಸ್ಕೂಟರ್‌ನಲ್ಲಿ ಕೀ ಕಾಣಿಸುತ್ತಿರಲಿಲ್ಲ.


ಹುಡುಕಾಡಿದರೂ ಕೀ ಸೀಗದೇ ಇದ್ದಾಗ ಸ್ಕೂಟರ್‌ನ್ನು ಪಂಪ್‌ವೆಲ್‌ನ ಬಿಲ್ಡಿಂಗ್‌ವೊಂದರ ಬಳಿ ರಾತ್ರಿ ಪಾರ್ಕ್ ಮಾಡಿ ಕಾರಿನಲ್ಲಿ ಮನೆಗೆ ಹೋಗಿದ್ದರು. ಇದೇ ವೇಳೆ ಈ ಘಟನೆ ನಡೆದಿದೆ.

- Advertisement -

Latest News

error: Content is protected !!