Wednesday, June 3, 2026
Homeಕರಾವಳಿಬೆಳ್ತಂಗಡಿ : ಗ್ರಾಮಸಹಾಯಕ ಹೃದಯಘಾತದಿಂದ ನಿಧನ: ಕಚೇರಿಯಲ್ಲಿ ಕರ್ತವ್ಯದ ವೇಳೆ ಹೃದಯಾಘಾತ

ಬೆಳ್ತಂಗಡಿ : ಗ್ರಾಮಸಹಾಯಕ ಹೃದಯಘಾತದಿಂದ ನಿಧನ: ಕಚೇರಿಯಲ್ಲಿ ಕರ್ತವ್ಯದ ವೇಳೆ ಹೃದಯಾಘಾತ

- Advertisement -
- Advertisement -

ಬೆಳ್ತಂಗಡಿ : ಮೇಲಂತಬೆಟ್ಟು,ಸವಣಾಲು, ಮುಂಡೂರು ಗ್ರಾಮದ ಗ್ರಾಮಸಹಾಯಕರಾಗಿದ್ದ ಕರ್ತವ್ಯದ ವೇಳೆ ಕಚೇರಿಯಲ್ಲಿ ಸುಂದರ್ ಗೌಡ (44) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಮೇಲಂತಬೆಟ್ಟು ಗ್ರಾಮಲೆಕ್ಕಿಗ ಕಚೇರಿಯಲ್ಲಿ ಗ್ರಾಮ ಸಹಾಯಕ ಸುಂದರಗೌಡ ಮತ್ತು ಗ್ರಾಮಲೆಕ್ಕಿಗ ಶಿವಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದರು ಈ ವೇಳೆ ಗ್ರಾಮಲೆಕ್ಕಿಗ ಶಿವಕುಮಾರ್ ಅವರು ಪಕ್ಕದಲ್ಲಿರುವ ಮೇಲಂಬೆಟ್ಟು ಗ್ರಾಮ ಪಂಚಾಯತ್ ಗೆ ಹೋಗಿ ವಾಪಸ್ ಬಂದಾಗ ಕುರ್ಚಿಯಿಂದ ಕೆಳಗೆ ಬಿದ್ದಿದ್ದರು. ತಕ್ಷಣ ಹೊರಗಡೆ ಇದ್ದ ಮುಂಡೂರು ಗ್ರಾಮದ ಸದಸ್ಯರಾದ ಸಂತೋಷ್ ಅವರು ಬಂದು ತನ್ನ ಕಾರಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ವೇಳೆ ಸುಂದರ್ ಗೌಡ ನಿಧನಹೊಂದಿದ್ದಾರೆ‌.

ವಿಚಾರ ತಿಳಿದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬೆಳ್ತಂಗಡಿ ತಾಲೂಕು ಕಚೇರಿ ಸಿಬ್ಬಂದಿ , ತಹಶೀಲ್ದಾರ್ , ಗ್ರಾಮಲೆಕ್ಕಿಗ ,ಗ್ರಾಮಸಹಾಯಕರು ಬಂದು ಮೃತರ ಅಂತಿಮ ದರ್ಶನ ಪಡೆದಿದ್ದಾರೆ.

- Advertisement -

Latest News

error: Content is protected !!