Monday, June 8, 2026
Homeಕರಾವಳಿ ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂದೂ ಮುಂದುವರೆದ ಹಿಜಾಬ್ ವಿವಾದ:  ಕಾಲೇಜಿನ ಒಳ ಆವರಣದಲ್ಲಿ ತರಗತಿ...

 ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂದೂ ಮುಂದುವರೆದ ಹಿಜಾಬ್ ವಿವಾದ:  ಕಾಲೇಜಿನ ಒಳ ಆವರಣದಲ್ಲಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ.

- Advertisement -
- Advertisement -

ಉಪ್ಪಿನಂಗಡಿ: ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದೂ ಕೂಡ ಹಿಜಾಬ್ ಗಲಾಟೆ ಮುಂದುವರೆದಿದೆ. ಕಾಲೇಜಿನ ಒಳ ಆವರಣದಲ್ಲಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೆಲ ವಿದ್ಯಾರ್ಥಿಗಳಿಗೆ ಹಿಜಾಬ್ ಗೆ ಅವಕಾಶ ನೀಡಿದ್ದಕ್ಕೆ ಪ್ರತಿಭಟನೆ, ಕಾಲೇಜಿನ ಕ್ಯಾಂಪಸ್ ನ ಬದಲು ತರಗತಿ ಬಳಿಯ ಒಳ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ನಿನ್ನೆ ಆರು ಮಂದಿ ಹಿಜಾಬ್ ವಿದ್ಯಾರ್ಥಿನಿಯರನ್ನ ಅಮಾನತು ಮಾಡಲಾಗಿತ್ತು. ಆದರೂ ಇಂದು ಮತ್ತೆ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ ಎಂದು ಆರೋಪ ಮಾಡಲಾಗಿದೆ,

ಹಿಜಾಬ್ ತೆಗೆಸುವಂತೆ ಪಟ್ಟು ಹಿಡಿದು ವಿದ್ಯಾರ್ಥಿಗಳು ತರಗತಿ ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ನಿನ್ನೆ ಈ ಬಗ್ಗೆ ಸುದ್ದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ನಡೆದಿತ್ತು. ವಿದ್ಯಾರ್ಥಿಗಳ ಗುಂಪು ಕ್ಯಾಮರ ಕಸಿದು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿತ್ತು.ಈ ಸಂಬಂಧ ಕಾಲೇಜಿನ 25 ವಿದ್ಯಾರ್ಥಿಗಳ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!