Thursday, June 4, 2026
Homeಕರಾವಳಿಉಡುಪಿಉಡುಪಿ: ಬಿ.ಆರ್. ಶೆಟ್ಟಿ ನಿರ್ವಹಣೆಯಲ್ಲಿ ಇದ್ದ ಹೆರಿಗೆ ಆಸ್ಪತ್ರೆ ಸರ್ಕಾರದ ವಶಕ್ಕೆ

ಉಡುಪಿ: ಬಿ.ಆರ್. ಶೆಟ್ಟಿ ನಿರ್ವಹಣೆಯಲ್ಲಿ ಇದ್ದ ಹೆರಿಗೆ ಆಸ್ಪತ್ರೆ ಸರ್ಕಾರದ ವಶಕ್ಕೆ

- Advertisement -
- Advertisement -

ಉಡುಪಿ:  ಉಡುಪಿ ಮೂಲದ ದುಬೈನ ಬಹುಕೋಟಿ ಉದ್ಯಮಿ ಬಿ ಆರ್ ಶೆಟ್ಟಿ ಅವರ ನಿರ್ವಹಣೆಯಲ್ಲಿ ಇದ್ದ ಹೆರಿಗೆ ಆಸ್ಪತ್ರೆಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ.

ಆರ್ಥಿಕ ನಷ್ಟ ಅನುಭವಿಸಿದ ನಂತರ ಸರಕಾರಕ್ಕೆ ಆಸ್ಪತ್ರೆ ಹಸ್ತಾಂತರಿಸಿದ್ದಾರೆ ಬಿ.ಆರ್. ಶೆಟ್ಟಿ. ನಾಳೆಯಿಂದ ಆಸ್ಪತ್ರೆಯನ್ನು ಸರ್ಕಾರ ನಿರ್ವಹಣೆ ಮಾಡಲಿದೆ. ಖಾಸಗಿ ನಿರ್ವಹಣೆಯ ವೇಳೆ ಹಲವು ಸಿಬ್ಬಂದಿಗೆ ಸಂಬಳ ನೀಡಿರಲಿಲ್ಲ. 5 ತಿಂಗಳು, 3 ತಿಂಗಳು ಹೀಗೆ ಬಿಆರ್ ವೆಂಚರ್ಸ್ ಸಿಬ್ಬಂದಿಗೆ ಸಂಬಳ ಬಾಕಿ ಇರಿಸಿಕೊಂಡಿದೆ.

ಸಂಬಳ ಪಾವತಿಗೆ ಆಗ್ರಹಿಸಿ ಸಿಬ್ಬಂದಿ ಆಸ್ಪತ್ರೆ ಮುಂದೆ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಕಿ ಸಂಬಳ ನೀಡುವಂತೆ ಸರ್ಕಾರವನ್ನು ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ. ಇನ್ನು ಆಸ್ಪತ್ರೆಯ ಐಷಾರಾಮಿ ಸೋಫಾ ಕುರ್ಚಿ ಟೇಬಲ್ ಗಳನ್ನು ಸಾಗಿಸಲು ಬಿ.ಆರ್.ವೆಂಚರ್ಸ್ ಮುಂದದಾಗ ಅದಕ್ಕೆ ತಡೆ ಒಡ್ಡಲಾಗಿದೆ. ಪೀಠೋಪಕರಣ ಸಾಗಾಟಕ್ಕೆ ಆರೋಗ್ಯ ಇಲಾಖೆ ತಡೆಯೊಡ್ಡಿದೆ.

- Advertisement -

Latest News

error: Content is protected !!