Thursday, June 4, 2026
Homeತಾಜಾ ಸುದ್ದಿನಾಪತ್ತೆಯಾಗಿದ್ದ ನೇಪಾಳ ವಿಮಾನದ ಅವಶೇಷಗಳು ಪತ್ತೆ

ನಾಪತ್ತೆಯಾಗಿದ್ದ ನೇಪಾಳ ವಿಮಾನದ ಅವಶೇಷಗಳು ಪತ್ತೆ

- Advertisement -
- Advertisement -

ಕಠ್ಮಂಡು: ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದ ನಾಪತ್ತೆಯಾಗಿದ್ದ ನೇಪಾಳದ ಪ್ರಯಾಣಿಕ ವಿಮಾನದ ಅವಶೇಷಗಳು ಮುಸ್ತಾಂಗ್ ಜಿಲ್ಲೆಯ ಸನೋಸ್ವೇರ್ ನಲ್ಲಿ ಪತ್ತೆಯಾಗಿದೆ ಎಂದು ನೇಪಾಳ ಸೇನೆಯ ವಕ್ತಾರ ಬ್ರಿಗೇಡಿಯರ್‌ ಜನರಲ್ ನಾರಾಯಣ್ ಸಿಲ್ವಾಲ್ ಟ್ವೀಟ್ ಮಾಡಿದ್ದಾರೆ.

ನಾಲ್ವರು ಮುಂಬೈ ನಿವಾಸಿಗಳು ಸೇರಿದಂತೆ 22 ಮಂದಿ ಪ್ರಯಾಣಿಕರ ಕುರುಹುಗಳು ಇನ್ನೂ ಪತ್ತೆಯಾಗಿಲ್ಲ. ಇವರಿಗಾಗಿ ನೇಪಾಳ ಸೇನೆ ಶೋಧ ಕಾರ್ಯಾಚರಣೆ ಕೈಗೊಂಡಿದೆ. ವಿಮಾನವು ಭಾನುವಾರ ನೇಪಾಳದ ಪ್ರವಾಸಿ ತಾಣ ಪೋಖರಾ ನಗರದಿಂದ ಜೋಮ್ ಸಮ್ ನಗರಕ್ಕೆ ಹೊರಟಿತ್ತು

ಲೆಫ್ಟಿನೆಂಟ್ ಮಂಗಲ್ ಶ್ರೇಷ್ಠ, ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಗೈಡ್ ಗಳು ಈಗಾಗಲೇ ವಿಮಾನದ ಅವಶೇಷ ಪತ್ತೆಯಾದ ಸ್ಥಳವನ್ನು ತಲುಪಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರಕ್ಷಣಾ ತಂಡದ ಸದಸ್ಯರು ಚಿಕ್ಕ ಹೆಲಿಕಾಪ್ಟರುಗಳ ಮೂಲಕ ಸ್ಥಳಕ್ಕೆ ತಲುಪಲು ಪ್ರಯತ್ನ ನಡೆಸಿದ್ದಾರೆ. ಸ್ಥಳಕ್ಕೆ ತಲುಪಿಸಲು ಸಾಧ್ಯವಿರುವ ಎಲ್ಲಾ ವಿಧಾನಗಳನ್ನು ಪರಿಗಣಿಸಲಾಗುತ್ತಿದೆ,” ಎಂದು ಬ್ರಿಗೇಡಿಯರ್‌ ಜನರಲ್ ನಾರಾಯಣ್ ಸಿಲ್ವಾಲ್ ಟ್ವೀಟ್ ಮಾಡಿದ್ದಾರೆ.

- Advertisement -

Latest News

error: Content is protected !!