Thursday, June 4, 2026
Homeತಾಜಾ ಸುದ್ದಿನಟಿಯ ಹತ್ಯೆಗೆ ಗುಂಡಿನಿಂದಲೇ ಉಗ್ರರಿಗೆ ಖಡಕ್ ಉತ್ತರ ನೀಡಿದ ಭಾರತೀಯ ಸೇನೆ 

ನಟಿಯ ಹತ್ಯೆಗೆ ಗುಂಡಿನಿಂದಲೇ ಉಗ್ರರಿಗೆ ಖಡಕ್ ಉತ್ತರ ನೀಡಿದ ಭಾರತೀಯ ಸೇನೆ 

- Advertisement -
- Advertisement -

ಟಿವಿ ಕಾರ್ಯಕ್ರಮ ಹಾಗೂ ಟಿಕ್ಟಾಕ್ ಮೂಲಕ ಪ್ರಸಿದ್ಧಿ ಪಡೆದಿದ್ದ ನಟಿ ಅಮೀನ್ ಭಟ್ ಅವರನ್ನು ಭಯೋತ್ಪಾದಕರು ಗುಂಡು ಹಾರಿಸಿ ಕೊಂದಿದ್ದರು. ಈ ಘಟನೆಗೆ ಸಂಬಂಧಿಸಿದ್ದಂತೆ ನಟಿಯ ಹತ್ಯೆಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೊಯ್ಬಾದ ಇಬ್ಬರು ಉಗ್ರರು ಭದ್ರತಾಪಡೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ.

ನಟಿ ಅಮೀನ್ ಭಟ್ ಅವರನ್ನು ಕ್ರೂರವಾಗಿ ಭಯೋತ್ಪಾದಕರು ಹತ್ಯೆ ಮಾಡಿದ್ದರು. ಇದೀಗ ತಡರಾತ್ರಿ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅಮೀನ್ ಭಟ್ ಅವರನ್ನು ಕೊಂದು ಹಾಕಿದ್ದ ಇಬ್ಬರು ಉಗ್ರರು ಭಾರತೀಯ ಸೇನಾ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಹತ್ಯೆಯಾದ ವ್ಯಕ್ತಿಗಳನ್ನು ಭಯೋತ್ಪಾದಕರಾದ ಶಾಹಿದ್ ಮುಫ್ಲಾಕ್ ಭಟ್, ಫರ್ಹಾನ್ ಹಬೀಬ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಎಲ್‌ಇಟಿ ಲತೀಫ್ ಅವರ ಸೂಚನೆಯ ಮೇರೆಗೆ ಟಿವಿ ಕಲಾವಿದೆಯನ್ನು ಕೊಂದಿದ್ದಾರೆ ಎಂದು ಹೇಳಲಾಗಿದೆ. ಉಗ್ರರ ಮಾರಕಾಸ್ತ್ರಗಳ ಜತೆಗ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ದಿವಂಗತ ಅಮ್ರೀನ್ ಭಟ್ ಅವರ ಹತ್ಯೆ ಪ್ರಕರಣವನ್ನು 24 ಗಂಟೆಗಳಲ್ಲಿ ಪರಿಹರಿಸಲಾಗಿದೆ ಎಂದು ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

- Advertisement -

Latest News

error: Content is protected !!