- Advertisement -
![]()
- Advertisement -
ಮಂಗಳೂರು: ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 3. 375 ಕೆ.ಜಿ. ಗಾಂಜಾವನ್ನು ದಕ್ಷಿಣ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ಉಪನಿರೀಕ್ಷಕ ಶೀತಲ್ ಅಲಗೂರ್ ಅವರ ನೇತೃತ್ವದ ತಂಡ ಸೆಂಟ್ರಲ್ ರೈಲ್ವೇ ಕಾಲನಿಯ 2ನೇ ಗೇಟ್ ಬಳಿ ಕೇರಳದ ಮಹಮ್ಮದ್ ಮುಸ್ತಾಫ ಮತ್ತು ಮಹಮ್ಮದ್ ಜಜಿಲ್‌ನನ್ನು ಬಂಧಿಸಿದೆ.
ಆರೋಪಿಗಳಿಂದ 3.375 ಕೆ.ಜಿ. ಗಾಂಜಾ, 2 ಮೊಬೈಲ್ ಹಾಗೂ 2,500 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
- Advertisement -


