Saturday, June 28, 2025
Homeಕರಾವಳಿಸ್ನೇಹಿತೆಯೊಂದಿಗೆ ನಡೆದುಕೊಂಡು‌ಹೋಗುತ್ತಿದ್ದಾಗ ರೈಲು‌ ಬಡಿದು ಬಾಲಕಿ ಸಾವು

ಸ್ನೇಹಿತೆಯೊಂದಿಗೆ ನಡೆದುಕೊಂಡು‌ಹೋಗುತ್ತಿದ್ದಾಗ ರೈಲು‌ ಬಡಿದು ಬಾಲಕಿ ಸಾವು

spot_img
- Advertisement -
- Advertisement -

ಕೇರಳ: ಸ್ನೇಹಿತೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ರೈಲು ಬಡಿದು 16 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕೇರಳದಲ್ಲಿ ಸಂಭವಿಸಿದೆ.

ಕರುವಂತುರುತಿ ಮೂಲದ ನಫತ್ ಫತಾಹ್ (16) ಮೃತ ಬಾಲಕಿ.
ನಿನ್ನೆ ತನ್ನ ಸ್ನೇಹಿತೆ ಜೊತೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕಿ ನಫತ್ ಫತಾಹ್ ಚಲಿಸುತ್ತಿದ್ದ ಕೊಯಮತ್ತೂರು-ಮಂಗಳೂರು ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದ್ದಾಳೆ.

ಪರಿಣಾಮ ಪಕ್ಕದ ನದಿಗೆ ಎಸೆಲ್ಪಟ್ಟಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ನದಿಯ ಪ್ರವಾಹದಿಂದ ಕೊಚ್ಚಿ ಹೋಗಿದ್ದ ಆಕೆಯ ಶವವನ್ನು ಬೇಪುರದಿಂದ ಪೊಲೀಸರು  ಮೇಲೆತ್ತಿದ್ದಾರೆ.

ಘಟನೆಯಲ್ಲಿ ನಫತ್ ಫತಾಹ್ ಜೊತೆಗಿದ್ದ ಆಕೆಯ ಸ್ನೇಹಿತೆಯೂ ಗಾಯಗೊಂಡಿದ್ದಾಳೆ. ಇದೀಗ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದಾರೆ.

- Advertisement -
spot_img

Latest News

error: Content is protected !!