Saturday, June 6, 2026
Homeಕರಾವಳಿಉಡುಪಿಕಾರ್ಕಳ : ಬ್ರೇಕ್ ಹಾಕುವಾಗ ಬೈಕ್ ನಿಂದ ಆಯತಪ್ಪಿ ಬಿದ್ದು, ಮಹಿಳೆ ಸಾವು

ಕಾರ್ಕಳ : ಬ್ರೇಕ್ ಹಾಕುವಾಗ ಬೈಕ್ ನಿಂದ ಆಯತಪ್ಪಿ ಬಿದ್ದು, ಮಹಿಳೆ ಸಾವು

- Advertisement -
- Advertisement -

ಕಾರ್ಕಳ : ಬೈಕ್ ನಲ್ಲಿ  ತೆರಳುತ್ತಿದ್ದ  ಸಹ ಸವಾರೆಯೊಬ್ಬರು, ರಸ್ತೆಗೆ ಎಸೆಯಲ್ಪಟ್ಟು ಸಾವನ್ನಪ್ಪಿರುವ ಘಟನೆ ಕಾರ್ಕಳದ ವರಂಗ ಗ್ರಾಮದಲ್ಲಿ ನಡೆದಿದೆ.

ಸುನೀತಾ(45) ಮೃತ ದುರ್ದೈವಿ. ದಿವಾಕರ್ ಎಂಬವರ ಬೈಕ್ ನಲ್ಲಿ ವರಂಗದಿಂದ ಉಪ್ಪಳ ಕಡೆಗೆ ಸುನೀತಾ ತೆರಳುತ್ತಿದ್ದರು. ಈ ವೇಳೆ  ಮೈಲುಕಲ್ಲು ಎಂಬಲ್ಲಿಗೆ ತಲುಪಿದಾಗ ದಿವಾಕರ್ ಒಮ್ಮೆಲೆ ಬ್ರೇಕ್ ಹಾಕಿದ್ದಾರೆ.ಪರಿಣಾಮ ಡಾಂಬರು ರಸ್ತೆಗೆ ಬಿದ್ದ ಸುನೀತಾ ಅವರ ತಲೆಗೆ ಬಲವಾದ ಏಟು ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಅಜಾಗರೂಕತೆಯ ಬೈಕ್ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!