Sunday, June 7, 2026
Homeಕರಾವಳಿಮಂಗಳೂರು: ಪತ್ನಿಗೆ ತಿಳಿಯದೆ ಇನ್ನೊಬ್ಬಳನ್ನು ಮದುವೆಯಾಗುತ್ತಿದ್ದ ಪತಿ: ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಹೆಂಡ್ತಿ ಎಂಟ್ರಿ!

ಮಂಗಳೂರು: ಪತ್ನಿಗೆ ತಿಳಿಯದೆ ಇನ್ನೊಬ್ಬಳನ್ನು ಮದುವೆಯಾಗುತ್ತಿದ್ದ ಪತಿ: ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಹೆಂಡ್ತಿ ಎಂಟ್ರಿ!

- Advertisement -
- Advertisement -

ಮಂಗಳೂರು: ಪ್ರೀತಿಸಿ ಮದುವೆಯಾಗಲು  ಸಿದ್ಧತೆ ನಡೆಸುತ್ತಿದ್ದ  ವಧು-ವರ ಮಂಟಪದಿಂದ ಎಸ್ಕೇಪ್ ಆದ ಆಶ್ಚರ್ಯಕರ ಘಟನೆ ಮಂಗಳೂರಿನ ಮುಲ್ಕಿಯ ಪಡುಪಣಂಬೂರು ಬಳಿ ನಡೆದಿದೆ.

ವರನ ಮೊದಲ ಪತ್ನಿ ಮದುವೆಗೆ ಬಂದಿದ್ದೇ ಈ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ.  ಖಾಸಗಿ ಬಸ್‌ನ ಚಾಲಕ ತೀರ್ಥಹಳ್ಳಿಯ ಯುವಕ ಸಸಿಹಿತ್ಲು ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ಮದುವೆ ಸಭಾಂಗಣದ ಹೊರಗೆ ನವ ವಧು ವರನ ಫೋಟೋ ಶೂಟಿಂಗ್ ನಡೆಯುತ್ತಿತ್ತು.ಇದೇ ಸಂದರ್ಭ ಈತನ ಮೊದಲ ಪತ್ನಿ ಬಂದು ಮದುವೆ ಹಾಲ್ ನಲ್ಲಿ ಗಲಾಟೆ ಮಾಡಿದ್ದಾಳೆ.

ತನಗೆ ಒಂದು ಗಂಡು ಮಗುವಿದ್ದು ಈಗ ಮತ್ತೊಂದು ಮದುವೆಯಾಗಲು ಹೊರಟಿದ್ದಾನೆ ಎಂದು ಹೇಳಿದ್ದು ಕಕ್ಕಾಬಿಕ್ಕಿಯಾದ ವರ ವಧುವಿನ ಜೊತೆ ಎಸ್ಕೇಪ್ ಆಗಿದ್ದಾನೆ. ಘಟನೆ ಬಗ್ಗೆ ವಧುವಿನ ಪೋಷಕರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!