Friday, June 5, 2026
Homeಕರಾವಳಿಕಾರ್ಕಳ: ಮಾಲ್ ಮೇಲ್ವಿಚಾರಕನ ಮೇಲೆ ಆಟೋ ಚಾಲಕರಿಂದ ಹಲ್ಲೆ

ಕಾರ್ಕಳ: ಮಾಲ್ ಮೇಲ್ವಿಚಾರಕನ ಮೇಲೆ ಆಟೋ ಚಾಲಕರಿಂದ ಹಲ್ಲೆ

- Advertisement -
- Advertisement -

ಕಾರ್ಕಳ: ಮಾಲ್ ಮೇಲ್ವಿಚಾರಕರ ಮೇಲೆ ರಿಕ್ಷಾ ಚಾಲಕರು ಹಲ್ಲೆ ನಡೆಸಿರುವ ಘಟನೆ ಕಾರ್ಕಳದ ಜೋಡುರಸ್ತೆಯಲ್ಲಿ ನಡೆದಿದೆ. ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ಮೇಲ್ವಿಚಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯೋಗೀಶ್ ನಾಯಕ್ (47) ಹಲ್ಲೆಗೊಳಗಾದವರು. ಏಪ್ರಿಲ್ 29 ರಂದು ನಡೆದ ಘಟನೆ ತಡವಿ ಬೆಳಕಿಗೆ ಬಂದಿದೆ.

ಏಪ್ರೀಲ್ 29ರಂದು ಸಂಜೆ 6 ಗಂಟೆಗೆ ಯೋಗೀಶ್ ನಾಯಕ್ ಅವರು ತನ್ನ ಬೈಕ್‌ನಲ್ಲಿ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ನಿಂದ ಅದೇ ಸಂಸ್ಥೆಗೆ ಸೇರಿದ ರಸ್ತೆಯ ಮತ್ತೊಂದು ಬದಿಯಲ್ಲಿರು ಪೂರ್ಣಿಮಾ ಪ್ರೈಮ್ ಮಾಲ್‌ಗೆ ಕೆಲಸದ ನಿಮಿತ್ತ ಹೋಗಿ ವಾಪಾಸ್ಸಾಗುತ್ತಿದ್ದಾಗ ಆರೋಪಿಗಳಾದ ಆರೋಪಿ ಗಳಾದ ಪದ್ಮನಾಭ ಶೆಟ್ಟಿಗಾರ, ಮನೋಜ, ಫಾಸ್ಕರ್ ಸಮಾನ ಎಂಬವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ರಿಕ್ಷಾ ಬಾಡಿಗೆಯನ್ನು ತಮಗೆ ನೀಡದೇ ಬೇರೆಯವರಿಗೆ ನೀಡುತ್ತಿದ್ದೀಯಾ? ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ಥಳಿಸಿ, ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಗಾಯಾಳು ಕಾರ್ಕಳದ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆಗೈದ ಮೂವರು ರಿಕ್ಷಾ ಚಾಲಕರನ್ನು ನಗರ ಠಾಣಾ ಪೊಲೀಸರು ವಶಕ್ಕೆ ತೆಗೆದಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ರಿಕ್ಷಾಗಳನ್ನು ಜಪ್ತಿ ಮಾಡಲಾಗಿದೆ.

- Advertisement -

Latest News

error: Content is protected !!