Sunday, June 7, 2026
Homeತಾಜಾ ಸುದ್ದಿಮನುಷ್ಯರಿಗೆ ಹಕ್ಕಿಜ್ವರ : ಚೀನಾದಲ್ಲಿ ಮೊದಲ ಪ್ರಕರಣ ಪತ್ತೆ

ಮನುಷ್ಯರಿಗೆ ಹಕ್ಕಿಜ್ವರ : ಚೀನಾದಲ್ಲಿ ಮೊದಲ ಪ್ರಕರಣ ಪತ್ತೆ

- Advertisement -
- Advertisement -

ಹಕ್ಕಿಜ್ವರ H3N8 ಸ್ಟೈನ್‌ನೊಂದಿಗೆ ಚೀನಾ ಮೊದಲ ಮಾನವ ಸೋಂಕನ್ನು ದಾಖಲಿಸಿದೆ ಎಂದು ದೇಶದ ಆರೋಗ್ಯ ಪ್ರಾಧಿಕಾರ ಮಂಗಳವಾರ ತಿಳಿಸಿದೆ. ಆದರೆ ಇದು ಜನರಲ್ಲಿ ಹರಡುವ ಅಪಾಯ ಕಡಿಮೆ ಎಂದು ಹೇಳಿದೆ.

ಮಧ್ಯ ಹೆನಾನ್ ಪ್ರಾಂತ್ಯದ ನಾಲ್ಕು ವರ್ಷದ ಬಾಲಕನಿಗೆ ಏಪ್ರಿಲ್ 5 ರಂದು ಜ್ವರ ಮತ್ತು ಇತರ ರೋಗ ಲಕ್ಷಣಗಳನ್ನು ಕಂಡುಬಂದ ಬಳಿಕ ರೂಪಾಂತರದ ಸೋಂಕಿಗೆ ಒಳಗಾಗಿರುವುದು ಗೊತ್ತಾಗಿದೆ.ಯಾವುದೇ ನಿಕಟ ಸಂಪರ್ಕಕ್ಕೆ ವೈರಸ್ ಸೋಂಕು ಬಂದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿಕೆಯಲ್ಲಿ ತಿಳಿಸಿದ್ದು, ಮಗು ತನ್ನ ಮನೆಯ ಕೋಳಿ ಮತ್ತು ಕಾಗೆಗಳೊಂದಿಗೆ ಸಂಪರ್ಕ ಹೊಂದಿತ್ತು ಎಂದು ತಿಳಿಸಿದೆ.
 
H3N8 ರೂಪಾಂತರವು ಈ ಹಿಂದೆ ವಿಶ್ವದ ಬೇರೆಡೆ ಕುದುರೆಗಳು, ನಾಯಿಗಳು, ಪಕ್ಷಿಗಳಲ್ಲಿ ಪತ್ತೆಯಾಗಿದೆ. ಆದರೆ ಮಾನವನಲ್ಲಿ ಪತ್ತೆಯಾಗಿದ್ದು ಇದೆ ಮೊದಲು. ಇದು ಕೋಳಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು.ಮಾನವನಲ್ಲಿ ಸೋಂಕಿನ ಪರಿಣಾಮ ಗಂಭೀರವಾಗಿ ಇರುವುದಿಲ್ಲ ಎಂದು ಹೇಳಲಾಗ್ತಿದೆ.

- Advertisement -

Latest News

error: Content is protected !!