Saturday, June 13, 2026
Homeತಾಜಾ ಸುದ್ದಿಎಳತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆದ ಹಗಲು ರಥೋತ್ಸವ

ಎಳತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆದ ಹಗಲು ರಥೋತ್ಸವ

- Advertisement -
- Advertisement -

ಮುಲ್ಕಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹಗಲು ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಎ.24 ಶ್ರೀಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ದ್ವಜಾರೋಹಣ ನಡೆಯಿತು.  ಇಂದು ಪ್ರಾತಃಕಾಲ ವಿಶೇಷ ಪ್ರಾರ್ಥನೆ, ನವಕ ಪ್ರಧಾನ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಶ್ರೀದೇವರ ಹಗಲು ರಥಾರೋಹಣ ನಡೆಯಿತು. ಸಾವಿರಾರು ಭಕ್ತರು ರಥ ಎಳೆದು ಪುನೀತರಾದರು. ಈ ಸಂದರ್ಭ ದೇವಸ್ಥಾನದ ತಂತ್ರಿಯವರು ಅರ್ಚಕ ಹಾಗೂ ಸಿಬ್ಬಂದಿ ವರ್ಗ, ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ನಾಳೆ ಮಹಾರಥೋತ್ಸವ ಸುಡುಮದ್ದು ಪ್ರದರ್ಶನ, ಅವಭೃತ ಸ್ನಾನ ಧ್ವಜಾವರೋಹಣ ನಡೆಯಲಿದೆ.

- Advertisement -

Latest News

error: Content is protected !!