Saturday, June 13, 2026
Homeತಾಜಾ ಸುದ್ದಿಬಿಗ್ ಬ್ರೇಕಿಂಗ್: ಮೇ 12 ರಿಂದ ಪ್ಯಾಸೆಂಜರ್ ರೈಲು ಓಡಾಟ ಶುರು

ಬಿಗ್ ಬ್ರೇಕಿಂಗ್: ಮೇ 12 ರಿಂದ ಪ್ಯಾಸೆಂಜರ್ ರೈಲು ಓಡಾಟ ಶುರು

- Advertisement -
- Advertisement -

ನವದೆಹಲಿ :  ಲಾಕ್ಡೌನ್ ಜಾರಿ ಮಾಡಿದ್ದರಿಂದ ದೇಶಾದ್ಯಂತ ಸ್ಥಗಿತಗೊಂಡಿದ್ದ ಪ್ರಯಾಣಿಕರ ರೈಲು ಸಂಚಾರ ನಾಳೆಯಿಂದ ಹಂತಹಂತವಾಗಿ ಆರಂಭವಾಗಲಿದೆ. ಇಂದು ಸಂಜೆ 4 ಗಂಟೆಯಿಂದಲೇ ಆನ್ಲೈನ್ ಬುಕಿಂಗ್ ಶುರುವಾಗಲಿದೆ.

ಹೌದು, ಲಾಕ್ ಡೌನ್ ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಮೇ 12 ರಿಂದ ದೆಹಲಿಯಿಂದ 15 ಸ್ಥಳಗಳಿಗೆ ರೈಲು ಸಂಚಾರ ಪ್ರಾರಂಭ ಮಾಡಲಿದೆ. ದೆಹಲಿಯಿಂದ ಬೆಂಗಳೂರು, ಮುಂಬೈ, ಅಹಮದಾಬಾದ್, ತಿರುವನಂತಪುರ, ಚೆನ್ನೈ, , ಅಗರ್ತಾಲಾ, ಪಾಟ್ನಾ, ಭುವನೇಶ್ವರ್, ಕೊಚ್ಚಿ, ಸೇರಿದಂತೆ ಹಲವು ಸ್ಥಳಗಳಿಗೆ ರೈಲು ಸೇವೆ ಪ್ರಾರಂಭವಾಗಲಿದೆ. ಪ್ರಯಾಣಿಕರು ಗಮನಿಸಬೇಕಾದ ಮುಖ್ಯವಾದ ವಿಷಯ ಅಂದರೆ ಆನ್ ಲೈನ್ ನಲ್ಲಿ ಮಾತ್ರ ಟಿಕೆಟ್ ಬುಕ್ಕಿಂಗ್ ಗೆ ಅವಕಾಶವಿರುತ್ತದೆ.

ಕೌಂಟರ್ ನಲ್ಲಿ ಟಿಕೆಟ್ ಕೊಡುವುದಿಲ್ಲ. ಪ್ರಯಾಣಿಕರು ಮಾತ್ರ ಪ್ಲಾಟ್ಫಾರ್ಮ್ ಗೆ ಬರಬೇಕಿದೆ. ಎಲ್ಲಾ ರೈಲುಗಳಿಗೆ ರಾಜಧಾನಿ ಎಕ್ಸ್ ಪ್ರೆಸ್ ರೈಲು ಪ್ರಯಾಣ ದರ ನಿಗದಿ ಮಾಡಿದ್ದು ಮೊದಲ ಹಂತದಲ್ಲಿ ಎಸಿ ಕೋಚ್ ಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎನ್ನಲಾಗಿದೆ.

- Advertisement -

Latest News

error: Content is protected !!