Friday, June 5, 2026
Homeಕರಾವಳಿಉಡುಪಿಉಡುಪಿ: ವಿಶ್ವ ಭೂ ದಿನ ಹಿನ್ನೆಲೆ ಕಡಲಕಿನಾರೆ ಸ್ವಚ್ಛತಾ ಕಾರ್ಯಕ್ರಮ

ಉಡುಪಿ: ವಿಶ್ವ ಭೂ ದಿನ ಹಿನ್ನೆಲೆ ಕಡಲಕಿನಾರೆ ಸ್ವಚ್ಛತಾ ಕಾರ್ಯಕ್ರಮ

- Advertisement -
- Advertisement -

ಉಡುಪಿ:  ವಿಶ್ವಭೂ ದಿನದ ಹಿನ್ನಲೆಯಲ್ಲಿ ಸಂತ ಮೇರಿ ಕಾಲೇಜಿನ  ವಿದ್ಯಾಥಿ೯ ಕ್ಷೇಮಾಭಿವೃದ್ಧಿ ಸಂಘ,ಎನ್ ಎಸ್ ಎಸ್,ಎನ್ ಸಿ ಸಿ ಘಟಕಗಳ ಸಹಯೋಗದೊಂದಿಗೆ  ಕಾಪು ಕಡಲಕಿನಾರೆಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

 ಸಕಲ ಜೀವರಾಶಿಗಳು ಆರೋಗ್ಯಪೂಣ೯ವಾಗಿ ಜೀವಿಸಬೇಕಾದರೆ ನಮ್ಮ  ಸುತ್ತಮುತ್ತಲಿನ ಜಲ , ವಾಯು,ಮಣ್ಣು ಎಲ್ಲವೂ ಸ್ವಚ್ಛವಾಗಿರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡರು.

ಪ್ರಾಂಶುಪಾಲರಾದ ಡಾ. ಹೇರಾಲ್ಡ್  ಐವನ್ ಮೊನಿಸ್ ರವರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿಯೇ ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳು  ತೊಡಗಿಸಿಕೊಳ್ಳುವುದು ಸಮಾಜಕ್ಕೆ ಮಾದರಿ ಎಂದರು. ಮಾಗ೯ದಶ೯ಕರಾಗಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ನಿದೇ೯ಶಕಿ ಯಶೋದಾ,ಎನ್ ಎಸ್ ಎಸ್ ಘಟಕದ ಸಂಯೋಜಕ ಶ್ರೀಪ್ರೇಮನಾಥ್,ಎನ್ ಸಿ ಸಿ ಘಟಕದ ಸಂಯೋಜಕ ಲೆಪ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ಭಾಗವಹಿಸಿದ್ದರು

- Advertisement -

Latest News

error: Content is protected !!