Saturday, June 6, 2026
Homeತಾಜಾ ಸುದ್ದಿದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ: ಮುಂದಿನ ಎರಡು ದಿನ ಕರಾವಳಿಯಲ್ಲಿ ಗುಡುಗು ಸಹಿತ...

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ: ಮುಂದಿನ ಎರಡು ದಿನ ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

- Advertisement -
- Advertisement -

ಮಂಗಳೂರು : ದ.ಕ. ಜಿಲ್ಲೆಯ ಗ್ರಾಮೀಣ ಭಾಗ ಸಹಿತ ಹಲವು ಕಡೆ ಇಂದು ಸಂಜೆ ಗುಡುಗು-ಮಿಂಚು ಸಹಿತ ಸಾಧಾರಣ ಮಳೆಯಾಗಿದೆ. ಕೆಲವು ದಿನಗಳಿಂದ ಕಡಿಮೆಯಾಗಿದ್ದ ಮಳೆಯು ಇಂದು ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಸಾಧಾರಣ ಸುರಿದಿದೆ. ಹಗಲು ವೇಳೆ ಉರಿಬಿಸಿಲು ಎಂದಿಗಿಂತ ತುಸು ಹೆಚ್ಚಿತ್ತು. ಸಂಜೆಯಾಗತ್ತಲೇ ಹೆಚ್ಚಿನ ಕಡೆಗಳಲ್ಲಿ ಮಳೆಯಾಗಿದೆ.

ಸುಳ್ಯದ ದೇವಚ್ಚಳ್ಳದಲ್ಲಿ 43 ಮಿ.ಮೀ., ಜಾಲ್ಲೂರು 37.5, ಕಲ್ಮಡ್ಕ 22.5, ಮಂಡೆಕೋಲು 19, ಬಾಳಿಲ 17.5, ಕಡಬದಲ್ಲಿ 12, ಬಿಳಿನೆಲೆ 29 ಮಿ.ಮೀ. ಸಹಿತ ಬೆಳ್ತಂಗಡಿಯ ಮುಂಡಾಜೆ, ನಡ, ಬಳಂಜ, ರಾಯಿ, ಪುತ್ತೂರಿನ ಅರಿಯಡ್ಕ, ಮಂಗಳೂರಿನ ಗುರುಪುರ ಮತ್ತಿತರ ಕಡೆಗಳಲ್ಲಿ ಮಳೆ ಸುರಿದಿದೆ. ವಿಟ್ಲ ಪೆರುವಾಜೆ ಭಾಗದಲ್ಲೂ ಗುಡುಗು ಸಹಿತ ಮಳೆಯಾಗಿದೆ. ಇದರಿಂದ ಬಿಸಿಲಿನ ಬೇಗೆ ದೂರವಾಗಿ ತುಸು ತಂಪಿನ ವಾತಾವರಣ ಉಂಟಾಯಿತು.

ಮಂಗಳೂರಿನಲ್ಲಿ ಗರಿಷ್ಠ 35.3 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 25.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಎರಡು ದಿನ ಕರಾವಳಿಯಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.

- Advertisement -

Latest News

error: Content is protected !!