Sunday, June 7, 2026
Homeಕರಾವಳಿಗೂನಡ್ಕ: ಮಳೆಗೆ ಮನೆಗಳಿಗೆ ಹಾನಿ, ಎಸ್.ಎಸ್ ಎಫ್ ಹಾಗೂ ಎಸ್.ವೈ.ಎಸ್ ನಿಂದ ತುರ್ತು ದುರಸ್ತಿ ಕಾರ್ಯ

ಗೂನಡ್ಕ: ಮಳೆಗೆ ಮನೆಗಳಿಗೆ ಹಾನಿ, ಎಸ್.ಎಸ್ ಎಫ್ ಹಾಗೂ ಎಸ್.ವೈ.ಎಸ್ ನಿಂದ ತುರ್ತು ದುರಸ್ತಿ ಕಾರ್ಯ

- Advertisement -
- Advertisement -

ಗೂನಡ್ಕ: ಕಳೆದೆರಡು ದಿನಗಳಿಂದ ಸುರಿದ ಭೀಕರ ಗಾಳಿ ಮಳೆಗೆ ಸುಳ್ಯ ತಾಲೂಕಿನ ಗೂನಡ್ಕ ದರ್ಖಾಸು ಪರಿಸರದ ಹತ್ತಾರು ಮನೆಗಳು ಹಾನಿಗೊಂಡಿದ್ದು, ಮನೆಯ ಸುಮಾರು ನಲ್ವತ್ತರಷ್ಟು ಮೇಲ್ಛಾವಣಿಗಳು ಹಾರಿ ಹೋಗಿ ಅತಂತ್ರ ಸ್ಥಿತಿಯಲ್ಲಿದ್ದಾಗ ತಕ್ಷಣ ಸ್ಪಂದಿಸಿದ ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ತುರ್ತು ಸೇವಾ ತಂಡದ ಸದಸ್ಯರು ನೆರವಿನ ಹಸ್ತವನ್ನು ಚಾಚಿ ಮನೆಯನ್ನು ತಕ್ಷಣ ದುರಸ್ತಿ ಮಾಡಿಕೊಟ್ಟಿದ್ದಾರೆ.

ಉದಾರದಾನಿಗಳನ್ನು ಸಂಪರ್ಕಿಸಿ ಬೇಕಾದ ಮೇಲ್ಛಾವಣಿಗಳ ವ್ಯವಸ್ಥೆಯನ್ನು ಮಾಡಿ ರಮ್ಜಾನಿನ ಉಪವಾಸದ ಮಧ್ಯೆಯೂ ಸ್ವತಃ ಕಾರ್ಯಕರ್ತರೇ ಮುನ್ನುಗ್ಗಿ ಮನೆಗಳನ್ನು ರಿಪೇರಿ ಮಾಡಿಕೊಟ್ಟಿರುವುದು ಎಲ್ಲೆಡೆಗಳಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ, ಗೂನಡ್ಕ ಜಮಾಅತ್ ಅಧ್ಯಕ್ಷರಾದ ಉಮರ್ ಹಾಜಿ, ಗ್ರಾಮ ಪಂಚಾಯತ್ ಸದಸ್ಯರಾದ ಪಿ. ಕೆ ಅಬೂಸಾಲಿರವರ ಸಹಿತ ಊರಿನ ಹಿರಿಯರು ಮಾರ್ಗದರ್ಶನವನ್ನು ನೀಡಿ ಸಹಕರಿಸಿದರು. ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ತುರ್ತು ಸೇವಾ ತಂಡದ ಫೈಝಲ್ ಝುಹ್ರಿ ಕಲ್ಲುಗುಂಡಿ, ಸಿದ್ದೀಖ್ ಗೂನಡ್ಕ, ಹಾರಿಸ್ ಗೂನಡ್ಕ, ಶರೀಫ್ ಜಯನಗರ, ನೌಶಾದ್ ಕೆರೆಮೂಲೆ, ಹಾರಿಸ್ ಬೋರುಗುಡ್ಡೆ, ರಹೀಂ ಪೈಚಾರು ಮುಂತಾದವರು ಹಾಗೂ ಗೂನಡ್ಕ ಜಮಾಅತ್, ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷ್, ಎಸ್.ವೈ.ಎಸ್, ಎಸ್ಸೆಸ್ಸೆಫ್ ನಾಯಕರು ಹಾಗೂ ಊರವರು ಈ ದುರಸ್ತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!