Saturday, June 13, 2026
Homeತಾಜಾ ಸುದ್ದಿಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಮುಸ್ಕಾನ್ ಗೆ ಅಲ್ ಖೈದಾ ಉಗ್ರನಿಂದ ಪ್ರಶಂಸೆ

ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಮುಸ್ಕಾನ್ ಗೆ ಅಲ್ ಖೈದಾ ಉಗ್ರನಿಂದ ಪ್ರಶಂಸೆ

- Advertisement -
- Advertisement -

ಮಂಡ್ಯ ಹಿಜಾಬ್ ಗಲಾಟೆಯ ವೇಳೆ ಮಂಡ್ಯದಲ್ಲಿ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಡಿ ಸುದ್ದಿಯಾಗಿದ್ದ ಮುಸ್ಕಾನ್ ಳನ್ನು ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಅಲ್-ಜವಾಹಿರಿ ಹಾಡಿ ಹೊಗಳಿದ್ದಾನೆ.

ಡೈಲಿ ಮೇಲ್‌ನ ವೆಬ್‌ಸೈಟ್‌ನಲ್ಲಿ ಪ್ರಸ್ತುತಪಡಿಸಲಾದ ಈ 9 ನಿಮಿಷಗಳ ವೀಡಿಯೊದಲ್ಲಿ ಜವಾಹಿರಿ ‘ಭಾರತದ ಹಿಂದೂ ಪ್ರಜಾಪ್ರಭುತ್ವದಲ್ಲಿ ಮುಸ್ಲಿಮರು ಕಿರುಕುಳಕ್ಕೊಳಗಾಗಿದ್ದಾರೆ’.ಎಂದಿದ್ದು ಹಿಜಾಬ್ ವಿವಾದದ ಸಮಯದಲ್ಲಿ ಬೆಳಕಿಗೆ ಬಂದ ಮಂಡ್ಯದ ಮುಸ್ಕಾನ್ ಳನ್ನು ‘ಮಹಾನ್ ಹುಡುಗಿ’ ಎಂದು ಕರೆದಿದ್ದಾನೆ.

ದಿ ನೋಬಲ್ ವುಮನ್ ಆಫ್ ಇಂಡಿಯಾ ಎಂಬ ಶೀರ್ಷಿಕೆಯಿರುವ ವೀಡಿಯೋದಲ್ಲಿ ಮುಸ್ಕಾನ್‍ಳನ್ನು ಹೊಗಳಿ ರಚಿಸಿದ ಶಾಹಿರಿಯಲ್ಲಿ, ಮುಸ್ಕಾನ್ ಕುರಿತು ವೀಡಿಯೋಗಳನ್ನು ನೋಡಿ ತಿಳಿದುಕೊಂಡಿದ್ದೇನೆ. ಇವಳಿಂದ ತುಂಬಾ ಪ್ರಭಾವಿತರಾಗಿದ್ದೇವೆ ಎಂದು ಹೇಳಿದ್ದಾನೆ. ಇದೆ ವೇಳೆ ಹಿಜಾಬ್ ನಿಷೇಧಿಸಿದ ದೇಶಗಳ ಮೇಲೆ ಆಕ್ರೋಶ ಹೊರ ಹಾಕಿದ್ದಾನೆ. ಮಸ್ಕಾನ್ ಪರವಾಗಿ ಅಲ್ ಜವಾಹಿರಿ ಮಾತನಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

- Advertisement -

Latest News

error: Content is protected !!