Monday, June 15, 2026
Homeತಾಜಾ ಸುದ್ದಿಹಿಂದುಳಿದ ವರ್ಗಗಳ ಮಠದ ಸ್ವಾಮೀಜಿಗಳ ಒಕ್ಕೂಟದಿಂದ 'ಸಿದ್ದು ಹಠಾವೋ' ಅಭಿಯಾನ

ಹಿಂದುಳಿದ ವರ್ಗಗಳ ಮಠದ ಸ್ವಾಮೀಜಿಗಳ ಒಕ್ಕೂಟದಿಂದ ‘ಸಿದ್ದು ಹಠಾವೋ’ ಅಭಿಯಾನ

- Advertisement -
- Advertisement -

ಕಲಬುರ್ಗಿ: ಹಾವೇರಿ ಶರಣಬಸವೇಶ್ವರ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಸಿದ್ದು ಹಠಾವೋ ಅಭಿಯಾನ ನಡೆಸಲು ಮಾ.30ರಂದು ಹಿಂದುಳಿದ ವರ್ಗಗಳ ಮಠದ ಸ್ವಾಮೀಜಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಹಿಂದೂ ಮಠದ ಸ್ವಾಮೀಜಿಗಳು ತೊಟ್ಟಿರುವ ವಸ್ತ್ರದ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಹಿಂದುಳಿದ ವರ್ಗಗಳ ಮಠದ ಸ್ವಾಮೀಜಿಗಳ ಒಕ್ಕೂಟದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಿದ್ದರಾಮಯ್ಯ ಅವರಿಗೆ ಧೈರ್ಯವಿದ್ದರೆ ಕ್ರೈಸ್ತ ಪಾದ್ರಿಗಳು ಅಥವಾ ಮುಸ್ಲಿಂ ಮೌಲ್ವಿಗಳ ವಿರುದ್ಧ ಅದೇ ಭಾಷೆ ಬಳಸಲಿ. ಹಿಜಾಬ್ ವಿವಾದದ ಬಗ್ಗೆ ಕರ್ನಾಟಕದ ಯಾವೊಬ್ಬ ಸ್ವಾಮೀಜಿಯೂ ಮಾತನಾಡಿಲ್ಲ. ಆದರೆ ಸಿದ್ದರಾಮಯ್ಯ ಅವರು ಸ್ವಾಮೀಜಿಗಳ ಡ್ರೆಸ್ ಕೋಡ್ ಅನ್ನು ಪ್ರಶ್ನಿಸಿದ್ದಾರೆ.

ಸ್ವಾಮೀಜಿಗಳಿಗೆ ಅವಮಾನ ಮಾಡಿರುವ ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. ಸ್ವಾಮೀಜಿಗಳ ಪೇಟಾ (ತಲೆ ಉಡುಗೆ) ಬಗ್ಗೆ ಮಾತನಾಡುವ ಹಕ್ಕು ಅವರಿಗೆ ಇಲ್ಲ. ಏಪ್ರಿಲ್ 2 ರಂದು ಸ್ವಾಮೀಜಿಗಳ ನಿಯೋಗ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಸಿದ್ದರಾಮಯ್ಯ ಅವರನ್ನು ದೂರವಿಡುವಂತೆ ಮನವಿ ಮಾಡಲಿದೆ ಎಂದರು.

- Advertisement -

Latest News

error: Content is protected !!