Friday, June 5, 2026
Homeಕರಾವಳಿಉಡುಪಿಉಡುಪಿ: ಪಾನ್ ಕಾರ್ಡ್ ಅಪ್ಡೇಟ್ ಮಾಡುವ ನೆಪದಲ್ಲಿ 1.23 ಲಕ್ಷ ರೂ ವಂಚನೆ !

ಉಡುಪಿ: ಪಾನ್ ಕಾರ್ಡ್ ಅಪ್ಡೇಟ್ ಮಾಡುವ ನೆಪದಲ್ಲಿ 1.23 ಲಕ್ಷ ರೂ ವಂಚನೆ !

- Advertisement -
- Advertisement -

ಉಡುಪಿ: ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಮೆಸೇಜ್ ಮಾಡಿ ಪಾನ್ ಕಾರ್ಡ್ ಅಪ್ಡೇಟ್ ಮಾಡುವ ನೆಪದಲ್ಲಿ ವಂಚನೆ ಮಾಡಿರುವ ಪ್ರಕರಣವೊಂದು ನಗರದ ಚಿಟ್ಪಾಡಿಯಲ್ಲಿ ನಡೆದಿದೆ.

ಇಲ್ಲಿನ ಚಿಟ್ಪಾಡಿ ನಿವಾಸಿ ಆನೆಟ್ ಡಿಸೋಜ ಅವರ ಮೊಬೈಲ್ ಗೆ ಪಾನ್ ಕಾರ್ಡ್ ಅಪ್ಲೇಟ್ ಮಾಡುವ ಲಿಂಕ್ ನೊಂದಿಗೆ ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ಈ ವೇಳೆ ಆನೆಟ್ ಡಿಸೋಜ ಅವರು ಸಂದೇಶದಲ್ಲಿ ನೀಡಿರುವ ಲಿಂಕ್ ನ್ನು ಓಪನ್ ಮಾಡಿ ಪಾನ್ ಕಾರ್ಡ್ ಅಪ್ಲೇಟ್ ಮಾಡಿದ್ದಾರೆ .

ಅಷ್ಟು ಮಾತ್ರವಲ್ಲದೇ ಮೊಬೈಲ್ ಗೆ ಬಂದ OTP ಯನ್ನು ಕೂಡಾ ಲಿಂಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನಂತರ ಆನೆಟ್ ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ . 1,23,000 / -ಹಣ ಕಡಿತಗೊಂಡಿರುತ್ತದೆ.


ಈ ವೇಳೆ ಕೂಡಲೇ ಎಚ್ಚೆತ್ತುಕೊಂಡ ಆನೆಟ್ ಅವರು ನ್ಯಾಷನಲ್ ಸೈಬರ್ ಕ್ರೈಂ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!