Saturday, June 6, 2026
Homeಉತ್ತರ ಕನ್ನಡಅಂಗಡಿ ಮುಂದೆ ಕಸ ಎಸೆದಿದ್ದಕ್ಕೆ ರಸ್ತೆಯಲ್ಲೇ ಜಗಳಕ್ಕೆ ನಿಂತ ಮಹಿಳೆಯರು

ಅಂಗಡಿ ಮುಂದೆ ಕಸ ಎಸೆದಿದ್ದಕ್ಕೆ ರಸ್ತೆಯಲ್ಲೇ ಜಗಳಕ್ಕೆ ನಿಂತ ಮಹಿಳೆಯರು

- Advertisement -
- Advertisement -

ಕಾರವಾರ: ಕಾರವಾರ ಹೂವಿನ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆ ಮಹಿಳೆಯರಿಬ್ಬರ ನಡುವೆ ಜಗಳ ನಡೆದಿದೆ.‌ ಅಂಗಡಿ ಮುಂದೆ ಕಸ ಎಸೆದ ಹಿನ್ನೆಲೆಯಲ್ಲಿ ಜಗಳ ನಡೆದಿದೆ.

ಕಾರವಾರ ನಗರದ ಹೂವಿನ ಮಾರುಕಟ್ಟೆಯಲ್ಲಿ ಘಟನೆ ನಡೆದಿದ್ದು, ನನ್ನ ಅಂಗಡಿ ಮುಂದೆ ನೀನು ಕಸ ಹಾಕಲು ಎಷ್ಟು ಧೈರ್ಯ ನಿಂಗೆ ಎಂದು ಜಗಳಕ್ಕೆ ಮಹಿಳೆ ಜಗಳಕ್ಕೆ ನಿಂತಿದ್ದಾರೆ.

ರಸ್ತೆಯಲ್ಲಿ ಪರಸ್ಪರ ಬೈಯ್ದಾಡಿ ಎಳೆದಾಡಿ ಮಹಿಳೆಯರು ಜಗಳ ಮಾಡಿದ್ದು, ಅಕ್ಕಪಕ್ಕದಲ್ಲಿ ಇದ್ದವರು ಬಿಡಿಸಲು ಯತ್ನಿಸಿದರೂ ಬಿಡಿಸಲು ತಕ್ಷಣಕ್ಕೆ ಸಾಧ್ಯವಾಗಿಲ್ಲ. ಜಗಳದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌

- Advertisement -

Latest News

error: Content is protected !!