Saturday, June 6, 2026
Homeತಾಜಾ ಸುದ್ದಿಹೆಬ್ರಿ: ಸೈಕಲ್ ಸ್ಕಿಡ್ ಆಗಿ ಬಾಲಕ ಸಾವು

ಹೆಬ್ರಿ: ಸೈಕಲ್ ಸ್ಕಿಡ್ ಆಗಿ ಬಾಲಕ ಸಾವು

- Advertisement -
- Advertisement -

ಹೆಬ್ರಿ: ಸೈಕಲ್ ಸ್ಕಿಡ್ ಆಗಿ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಹರಿಖಂಡಿಗೆ ಕಂಚಿಗುಂಡಿ ರಸ್ತೆಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಹರಿಖಂಡಿಗೆ ಕಂಚಿಗುಂಡಿ ನಿವಾಸಿ ಸತೀಶ್ ಕುಲಾಲ್ ಎಂಬವರ ಮಗ, 8ನೇ ತರಗತಿ ವಿದ್ಯಾರ್ಥಿ ಶ್ರೇಯಸ್(13) ಎಂದು ಗುರುತಿಸಲಾಗಿದೆ.

ಹರಿಖಂಡಿಗೆ ಕಂಚಿಗುಂಡಿಯಿಂದ ಸೈಕಲ್ ನಲ್ಲಿ ಹೋಗುತ್ತಿರುವಾಗ ಸೈಕಲ್ ಸ್ಕಿಡ್ ಆದ ಪರಿಣಾಮ ರಸ್ತೆಗೆ ಕವುಚಿ ಬಿದ್ದ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಶ್ರೇಯಸ್, ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!