Friday, June 5, 2026
Homeಕರಾವಳಿಸುಳ್ಯದ ಕೊಲ್ಲಮೊಗ್ರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ

ಸುಳ್ಯದ ಕೊಲ್ಲಮೊಗ್ರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ

- Advertisement -
- Advertisement -

 ಸುಳ್ಯ: ಹಾಲು ಕೊಡಲು ಬೈಕಿನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಸುಳ್ಯ ತಾಲೂಕಿನ ಕೊಲ್ಲಮೊಗ್ರದಲ್ಲಿ ನಡೆದಿದೆ.

ಇಲ್ಲಿನ ಕೋನಡ್ಕ ನಿವಾಸಿ ಗುರುಪ್ರಸಾದ್(21) ಗಾಯಗೊಂಡ ಯುವಕ. ಇಂದು ಬೆಳಗ್ಗೆ  ಇಡ್ನೂರು ಎಂಬಲ್ಲಿಗೆ ಗುರುಪ್ರಸಾದ್ ಡೈರಿಗೆ ಹಾಲು ನೀಡಲು ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ದಾಳಿ ನಡೆಸಿದ ಕಾಡಾನೆ ಸುಮಾರು 100 ಮೀಟರ್ ವರೆಗೆ ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ಸ್ಥಳದಲ್ಲಿ ಇದ್ದರು ಕಾಡಾನೆಯನ್ನು ಓಡಿಸಿದ್ದಾರೆ. ಗಂಭೀರ ಗಾಯಗೊಂಡಿರುವ ಗುರುಪ್ರಸಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!