- Advertisement -
- Advertisement -
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಬಂಟ್ವಾಳದ ಮಿತ್ತೂರು ಎಂಬಲ್ಲಿ ವಿದ್ಯುತ್ ಕಂಬಕ್ಕೆ ನ್ಯಾನೋ ಕಾರು ಡಿಕ್ಕಿ ಹೊಡೆದು ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ .
ಗಂಭೀರ ಗಾಯಗೊಂಡ ಕಾರು ಚಾಲಕ ಸುಳ್ಯ ಈಶ್ವರಮಂಗಲ ನಿವಾಸಿ ದೇವಿ. ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದಾಗ ಬಂಟ್ವಾಳದ ಮಿತ್ತೂರು ಬಳಿ ಅಪಘಾತ ಸಂಭವಿಸಿದೆ .
ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ . ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -