Saturday, June 6, 2026
HomeWorldನವದೆಹಲಿ: 2 ವರ್ಷಗಳ ನಂತರ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭ; ಮಾರ್ಚ್ 27 ರಿಂದ...

ನವದೆಹಲಿ: 2 ವರ್ಷಗಳ ನಂತರ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭ; ಮಾರ್ಚ್ 27 ರಿಂದ ಸೇವೆ

- Advertisement -
- Advertisement -

ನವದೆಹಲಿ: ಜಗತ್ತಿನಾದ್ಯಂತ ಇದೀಗ ಕೊರೊನಾವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದಿರುವುದರಿಂದ ಭಾರತ ಸರ್ಕಾರ 2ವರ್ಷಗಳ ನಂತರ ಮಾರ್ಚ್ 27ರಿಂದ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಿದೆ.


ಏರ್ ಬಬಲ್ ವ್ಯವಸ್ಥೆಗಳ ಮೂಲಕ ಕೆಲವು ಷರತ್ತುಗಳಿಗೆ ಒಳಪಟ್ಟು ಎರಡು ದೇಶಗಳು ಪರಸ್ಪರರ ಪ್ರದೇಶಗಳಿಗೆ ವಿಮಾನಗಳನ್ನು ನಿರ್ವಹಿಸಲು ಅನುವು ಮಾಡಿಕೊಡಲಾಗುತ್ತಿತ್ತು. ಈ ವ್ಯವಸ್ಥೆ ಅಡಿಯಲ್ಲಿ ಜುಲೈ 2020ರಿಂದ ಭಾರತ ಮತ್ತು 37 ದೇಶಗಳ ನಡುವೆ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.


ಅಂತಾರಾಷ್ಟ್ರೀಯ ವಿಮಾನದ ಕಾರ್ಯಾಚರಣೆಗಳು, ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ವಿಮಾನಯಾನ ಸಚಿವಾಲಯ ಹೇಳಿದೆ. 25 ತಿಂಗಳ ನಿಷೇಧದ ನಂತರ ಭಾರತಕ್ಕೆ ಮತ್ತು ಭಾರತದಿಂದ ಅಂತಾರರಾಷ್ಟ್ರೀಯ ಕಮರ್ಷಿಯಲ್ ವಿಮಾನಗಳು ಮಾರ್ಚ್ 27ರಿಂದ ಪುನರಾರಂಭಗೊಳ್ಳಲಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

- Advertisement -

Latest News

error: Content is protected !!