Sunday, June 7, 2026
Homeಕ್ರೀಡೆಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ

ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ

- Advertisement -
- Advertisement -

ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಇಂದು ಹೃದಯಾಘಾತದಿಂದ ನಿಧನ ರಾಗಿದ್ದಾರೆ. ವಾರ್ನ್ ಅವರಿಗೆ 52 ವರ್ಷ ವಯಸ್ಸಾಗಿತ್ತು.

ತಮ್ಮ ವಿಲ್ಲಾದಲ್ಲಿ ಶೇನ್ ವಾರ್ನ್ ಪ್ರತಿಕ್ರಿಯಿಸಲಾಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವೈದ್ಯರ ತಂಡ ಚಿಕಿತ್ಸಾ ಪ್ರಯತ್ನ ನಡೆಸಿದರೂ ಫಲಕಾರಿಯಾಗಿಲ್ಲ.

ಏಕ ದಿನ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕನಾಗಿಯೂ ವಾರ್ನ್ ಕಾರ್ಯ ನಿರ್ವಹಿಸಿದ್ದರು.

ಲೆಗ್ ಸ್ಪಿನ್ನರ್ ಆಗಿದ್ದ ಶೇನ್ ವಾರ್ನ್ ಥೈಲ್ಯಾಂಡ್ ನ ಕೋಹ್ ಸಮುಯಿ ಯಲ್ಲಿ ನಿಧನರಾಗಿದ್ದಾರೆ. 15 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ನಡೆಸಿದ್ದ ವಾರ್ನ್, 708 ಟೆಸ್ಟ್ ವಿಕೆಟ್ ಗಳನ್ನು ಪಡೆದಿದ್ದರು.

ವಾರ್ನ್ ನಿಧನದ ಬಗ್ಗೆ ಖಾಸಗಿತನ ಕಾಪಾಡಿಕೊಳ್ಳುವಂತೆ ಕುಟುಂಬ ವರ್ಗ ಮನವಿ ಮಾಡಿದ್ದು ಹೆಚ್ಚಿನ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

- Advertisement -

Latest News

error: Content is protected !!