Saturday, June 13, 2026
Homeಕರಾವಳಿಉಕ್ರೇನ್ ನಲ್ಲಿರುವ ಮಂಗಳೂರು ಮೂಲದ ವೈದ್ಯಕೀಯ ವಿದ್ಯಾರ್ಥಿಗಳು ಸೇಫ್

ಉಕ್ರೇನ್ ನಲ್ಲಿರುವ ಮಂಗಳೂರು ಮೂಲದ ವೈದ್ಯಕೀಯ ವಿದ್ಯಾರ್ಥಿಗಳು ಸೇಫ್

- Advertisement -
- Advertisement -

ಮಂಗಳೂರು: ಉಕ್ರೇನ್ ನಲ್ಲಿ ಮಂಗಳೂರು ಮೂಲದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಂಗಳೂರಿನ ಪಡೀಲು ನಿವಾಸಿಯಾಗಿರುವ ಕ್ಲಾಟನ್ ಎಂಬ ವಿದ್ಯಾರ್ಥಿ ಉಕ್ರೇನ್ ನಲ್ಲಿ ಇದ್ದು, ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಕ್ಲಾಟನ್ ತಿಳಿಸಿದ್ದಾರೆ ಎನ್ನಲಾಗಿದೆ. ಸದ್ಯ ಕ್ಲಾಟನ್ ಪೋಷಕರು ದಕ್ಷಿಣ ಕನ್ನಡ ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದು, ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ. ‌

ಇದಲ್ಲದೇ ಮಂಗಳೂರಿ‌ನ ದೇರೇಬೈಲ್ ನಿವಾಸಿಯಾಗಿರುವ ಅನೈನಾ ಅನ್ನ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಕೂಡಾ ಉಕ್ರೇನ್ ನಲ್ಲಿ ಇದ್ದಾರೆ. ಮಂಗಳೂರಿನಲ್ಲಿರುವ ತಾಯಿ ಸಂಧ್ಯಾ ಜೊತೆ ಮಾತನಾಡಿರುವ ಅನೈನಾ, ಸುರಕ್ಷಿತ ಸ್ಥಳದಲ್ಲಿರುವ ಬಗ್ಗೆ ಹೆತ್ತವರಿಗೆ ಮಾಹಿತಿ ನೀಡಿದ್ದಾರೆ. ಉಕ್ರೇನ್ ನ ಖಾರ್ಕಿವ್ ನಗರದ ಗಡಿ ಭಾಗದಲ್ಲಿ ‌ಅನೈನಾ ನೆಲೆಸಿದ್ದಾರೆ.‌

- Advertisement -

Latest News

error: Content is protected !!