Thursday, July 3, 2025
Homeಅಪರಾಧಫ್ಲಿಫ್ ಕಾರ್ಟ್ ನಲ್ಲಿ ಕೀ ಬಂಚ್ ಆರ್ಡರ್ ಮಾಡಿ 48 ಸಾವಿರ ಕಳೆದುಕೊಂಡ ಮಂಗಳೂರಿನ ವ್ಯಕ್ತಿ

ಫ್ಲಿಫ್ ಕಾರ್ಟ್ ನಲ್ಲಿ ಕೀ ಬಂಚ್ ಆರ್ಡರ್ ಮಾಡಿ 48 ಸಾವಿರ ಕಳೆದುಕೊಂಡ ಮಂಗಳೂರಿನ ವ್ಯಕ್ತಿ

spot_img
- Advertisement -
- Advertisement -

ಮಂಗಳೂರು : ಮೋಸ ಹೋಗುವವರು ಇರುವ ವರೆಗೂ ಮೋಸ ಮಾಡುವವರು ಇರುತ್ತಾರೆ ಅನ್ನೋ ಹಾಗೇ  ಫ್ಲಿಪ್ ಕಾರ್ಟ್​ನಲ್ಲಿ‌ ಆರ್ಡರ್ ಮಾಡಲಾಗಿದ್ದ ಕೀ ಬಂಚ್ ಬಾರದೆ ಇದ್ದ ಕಾರಣ, ಗೂಗಲ್​​ನಲ್ಲಿ ಸಿಕ್ಕಿದ ಕಸ್ಟಮರ್ ಕೇರ್ ನಂಬರ್​​ನ್ನು ಮಂಗಳೂರಿನ ವ್ಯಕ್ತಿಯೊಬ್ಬರು 48,354 ರೂಪಾಯಿಯನ್ನು ಕಳೆದುಕೊಂಡಿದ್ದಾರೆ

ಮಂಗಳೂರಿನ ವ್ಯಕ್ತಿಯೊಬ್ಬರು ಫ್ಲಿಪ್ ಕಾರ್ಟ್​ನಲ್ಲಿ ಕೀ ಬಂಚ್ ಆರ್ಡರ್ ಮಾಡಿದ್ದರು. 12 ದಿನಗಳಾದರೂ ಈ ಆರ್ಡರ್ ಕೈ ಸೇರದ ಕಾರಣ ರೀಫಂಡ್ ಪಡೆಯಲು ಗೂಗಲ್​ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿದ್ದಾರೆ. ಅದರಲ್ಲಿ ಸಿಕ್ಕ ನಂಬರ್​​ಗೆ ಕರೆ ಮಾಡಿದಾಗ ಫೋನ್ ರಿಸಿವ್ ಮಾಡಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅದೇ ನಂಬರ್​ನಿಂದ ಕರೆ ಬಂದಾಗ ಇವರು ತಮ್ಮ ಕೀ ಬಂಚ್ ಆರ್ಡರ್ ಬಂದಿಲ್ಲ ಎಂದು ತಿಳಿಸಿದ್ದಾರೆ.

ಅದಕ್ಕೆ ಹಿಂದಿಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಆರ್ಡರ್ ಬರುವುದಿಲ್ಲ, ರೀಫಂಡ್ ಮಾಡಲು ಎನಿ ಡೆಸ್ಕ್ ಆ್ಯಪ್ ಇನ್ಸ್ಟಾಲ್ ಮಾಡುವಂತೆ ತಿಳಿಸಿದ್ದಾನೆ. ಅದರಂತೆ ಇವರು ಆ್ಯಪ್ ಇನ್ಸ್ಟಾಲ್ ಮಾಡಿ‌ ಮಾಹಿತಿ ನೀಡಿದ್ದು, ಬಳಿಕ ಆತನ ಸೂಚನೆಯಂತೆ ಫ್ಲಿಪ್ ಕಾರ್ಟ್ ಆ್ಯಪ್ ಓಪನ್ ಮಾಡಿ ಅದರಲ್ಲಿ ಡೆಬಿಟ್ ಕಾರ್ಡ್ ಮತ್ತು ಸಿವಿವಿ ನಂಬರ್ ನಮೂದಿಸಿದ್ದಾರೆ. ತಕ್ಷಣ ಇವರ ಖಾತೆಯಿಂದ 48,354 ರೂಪಾಯಿ ಹಂತಹಂತವಾಗಿ ಕಡಿತವಾಗಿದೆ.

ಇದೀಗ ಫ್ಲಿಪ್ ಕಾರ್ಟ್​ನ ಕಸ್ಟಮರ್ ಕೇರ್​​ ನಂಬರ್​​ ಎಂದು ನಂಬಿಸಿ ಡೆಬಿಟ್ ಕಾರ್ಡ್​ ನಂಬರ್ ಮತ್ತು ಸಿವಿವಿ ಪಡೆದು ವಂಚನೆ ಮಾಡಿದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!