ಕೇರಳ: ಅದೃಷ್ಟ ಅನ್ನೋದು ಯಾರಪ್ಪನ ಸೊತ್ತು ಅಲ್ಲ. ಲಕ್ ಜೊತೆಗಿದ್ರೆ ರಾತ್ರೋರಾತ್ರಿ ಯಾರು ಕೂಡ ಸೂಪರ್ ಸ್ಟಾರ್ ಆಗ್ಬೋದು ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಕೇರಳ ಈ ವ್ಯಕ್ತಿ.
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಮಮ್ಮಿಕ್ಕಾ ಎಂಬ ಕೂಲಿ ಕಾರ್ಮಿಕರೊಬ್ಬರು ಎಂದಿನಂತೆ ಕೂಲಿಗಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಫೋಟೋವನ್ನು ಛಾಯಾಗ್ರಾಹಕ ಶರೀಕ್ ವಯಾಲಿಲ್ ಎಂಬವರು ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಕೊಳಕಾದ ಲುಂಗಿ ಸುತ್ತಿಕೊಂಡು, ಮಸುಕಾದ ಹಳೆಯ ಶರ್ಟ್ ಒಂದನ್ನು ಹಾಕಿಕೊಂಡು, ತಲೆಗೊಂದು ಟವೆಲ್ ಸುತ್ತಿಕೊಂಡು ಕೈಯಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದ ಮಮ್ಮಿಕ್ಕಾ ಸ್ಟೈಲ್ ನೋಡಿ ಅನೇಕರು ಫಿದಾ ಆಗಿದ್ದಾರೆ. ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ಫೋಟೋ ವೈರಲ್ ಆಗುತ್ತಿದ್ದಂತೆ ಅವರನ್ನು ಸ್ಥಳೀಯ ಸಂಸ್ಥೆಯೊಂದು ಮಾಡೆಲ್ ಆಗಿ ಆಯ್ಕೆ ಮಾಡಿದೆ. ಸೂಟು ಬೂಟು ಧರಿಸಿ, ಕೂಲಿಂಗ್ ಗ್ಲಾಸ್ ಹಾಕಿಕೊಂಡು, ಕೈಯಲ್ಲಿ ಟ್ಯಾಬ್ ಹಿಡಿದು ಮಮ್ಮಿಕ್ಕಾ ಅವರು ನೀಡಿರುವ ಫೋಟೋ ಪೋಸ್ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿವೆ. ಹಿಂದಿನ ಫೋಟೋದಲ್ಲಿದ್ದ ವ್ಯಕ್ತಿಗೂ, ಮಾಡೆಲ್ ಆಗಿ ಬದಲಾದ ವ್ಯಕ್ತಿಗೂ ಅಜಗಜಾಂತರ ವ್ಯತ್ಯಾಸವಿದೆ. ಇವರಿಬ್ಬರೂ ಒಂದೇ ವ್ಯಕ್ತಿ ಎಂದು ನಂಬಲಾರದಷ್ಟು ಬದಲಾವಣೆಗಳಾಗಿವೆ. ಸೋಷಿಯಲ್ ಮೀಡಿಯಾ ಏನು ಬೇಕಾದ್ರು ಚಮತ್ಕಾರ ಮಾಡ್ಬೋದು ಅನ್ನೋದಕ್ಕೆ ಮಮ್ಮಿಕ್ಕ ಬೆಸ್ಟ್ ಎಕ್ಸಾಂಪಲ್.